Advertisement
ಚಹಾ ಸೇವನೆ ಒಂದು ವಿಧವಾದ ಅಡಿಕ್ಷನ್ ಕೂಡಾ ಹೌದು. ನಿಗದಿತ ಸಮಯಕ್ಕೆ ಸರಿಯಾಗಿ ಚಹಾ ಸೇವೆನೆ ಮಾಡದಿದ್ದರೆ ಕೆಲ ವ್ಯಕ್ತಿಗಳ ಮನಸ್ಥಿತಿಗಳಲ್ಲಿ ಬದಲಾವಣೆಗಳಾಗುವುದನ್ನು ಗಮನಿಸಬಹುದಾಗಿದೆ. ರಾತ್ರಿ ವೇಳೆ ಚಹಾ ಸೇವನೆ ಮಾಡುವುದರಿಂದ ನಿದ್ರೆಯನ್ನು ತಡೆಯಬಹುದೆಂದು ಹಲವರು ರಾತ್ರಿ ವೇಳೆ ಚಹಾ ಸೇವನೆ ಮಾಡುವುದನ್ನು ನೊಡಬಹುದು.
Related Articles
Advertisement
ತುಳಸಿ ಸಾಮಾನ್ಯವಾಗಿ ವಿಟಮಿನ್ ಸಿ ಮತ್ತು ಸತುಗಳಿಂದ ತುಂಬಿರುತ್ತದೆ. ಈ ಸಸ್ಯವು ಆ್ಯಂಟಿ ವೈರಲ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ- ವಿರೋಧಿ ಗುಣಗಳಿಂದ ಕೂಡಿದೆ. ಇದನ್ನು ನಿತ್ಯದ ಚಹಾ ಅಥವಾ ಕಷಾಯದಲ್ಲಿ ಸೇರಿಸಿ ಕುಡಿಯಬಹುದಾಗಿದೆ. ಇದರಲ್ಲಿ ಆ್ಯಂಟಿ -ಆಕ್ಸಿಡೆಂಟ್ ಸಂಯುಕ್ತಗಳಾದ ರೋಸ್ಮರಿನಿಕ್ ಆಮ್ಲಗಳನ್ನು ಒಳಗೊಂಡಿದೆ. ಇದು ಉಸಿರಾಟದ ಸಮಸ್ಯೆ ಪರಿಹರಿಸಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಏಲಕ್ಕಿ
ಚಹಾದಲ್ಲಿ ಏಲಕ್ಕಿಯನ್ನು ಬೆರೆಸಿ ಸೇವನೆ ಮಾಡುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಭಾರತೀಯ ಮಸಾಲೆಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಲಕ್ಕಿ ಪರಿಮಳವು ಆಹಾರ ಪದಾರ್ಥಗಳ ಪರಿಮಳವನ್ನು ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದು. ನಿತ್ಯದ ಚಹಾ ಅಥವಾ ನಿಯಮಿತ ಸೇವನೆಯಿಂದಾಗಿ ದೇಹದಲ್ಲಿ ವೈರಸ್ ನಿರೋಧಕ ಕೋಶಗಳ ಬೆಳವಣಿಗೆ ಆಗುವುದು. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಖನಿಜಗಳು ಸಮೃದ್ಧವಾಗಿರುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಒಂದೆಲಗ
ಒಂದೆಲಗವನ್ನು ಸಾಮಾನ್ಯವಾಗಿ ಚಟ್ನಿ ಹಾಗೂ ಕಷಾಯವನ್ನು ಮಾಡಿ ಸೇವನೆ ಮಾಡುತ್ತಾರೆ. ಇದು ಸಹ ಸೋಂಕು ಮತ್ತು ರೋಗಾಣುಗಳನ್ನು ನಿವಾರಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ದೇಹವನ್ನು ಪೋಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಹಾಗಾಗಿ ಒಂದೆಲಗವನ್ನು ನಿಯಮಿತವಾಗಿ ಸೇವಿಸಬಹುದು ಎಂದು ಹೇಳಲಾಗುವುದು. ಚಹಾವನ್ನು ತಯಾರಿಸುವಾಗ ಸ್ಪಲ್ಪ ಪ್ರಮಾಣದಲ್ಲಿ ಒಂದೆಲಗದ ಸೊಪ್ಪನ್ನು ಸೇರಿಸುವುರಿಂದ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಪಡೆಯಬಹುದಾಗಿದೆ.
ಶುಂಠಿ
ಶುಂಠಿಯನ್ನು ಸಾಮಾನ್ಯವಾಗಿ ಸಾಂಬಾರು ಪದಾರ್ಥವಾಗಿ ಬಳಸಲಾಗುತ್ತದೆ. ಇದು ಕೇವಲ ಸಾಂಬಾರಿನಲ್ಲಿ ಬೆರೆತು ಬಾಯಿಗೆ ರುಚಿ ನೀಡುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಕೂಡಾ ಇದು ಒಳಗೊಂಡಿದೆ. ಗಡ್ಡೆ ರೂಪದ ಈ ಗಿಡಮೂಲಿಕೆಯು ವಿಟಮಿನ್ ಬಿ ನಂತಹ ಪೋಷಕಾಂಶಗಳಿಂದ ತುಂಬಿರುತ್ತದೆ. ಯುಗಯುಗಾಂತರಗಳಿಂದಲೂ ಇದನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಇರುವ ಔಷಧೀಯ ಗುಣಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ಜೊತೆಗೆ ಪರಿಪೂರ್ಣವಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ಶುಂಠಿಯನ್ನು ಚಹಾ ತಯಾರಿಸುವಾಗ ಬೆರೆಸಿದರೆ ಅದ್ಬುತ ಸ್ವಾದದ ಜೊತೆ ಜೊತೆಗೆ ದೇಹದಲ್ಲಿ ರೊಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಶೀತ, ಕಫದಂತಹಾ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯನ್ನು ಸೇವನೆ ಮಾಡುವುದರಿಂದ ಬಹುಬೇಗ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಕಾಳುಮೆಣಸು
ಕಾಳುಮೆಣಸು ಭಾರತೀಯ ಸಾಂಬಾರು ಪದಾರ್ಥಗಳಲ್ಲಿ ಅತ್ಯಂತ ಬೇಡಿಕೆಯ ಮಸಾಲೆಯಾಗಿದ್ದು. ಮಸಾಲೆಯುಕ್ತ ಪದಾರ್ಥಗಳನ್ನು ತಯಾರಿಸುವಾಗ ಕಾಳುಮೆಣಸನ್ನು ಸರ್ವೆ ಸಾಮಾನ್ಯವಾಗಿ ಬಳಸಲಾಗುತ್ತದೆ.
ಚಹಾ ತಯಾರಿಸುವಾಗ ಒಂದೆರಡು ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಾಮಾನ್ಯ ಶೀತದ ಸಮಸ್ಯೆಯಿಂದ ಬಳಲುತ್ತಿರುವವರು ಕಾಳು ಮೆಣಸನ್ನು ಸೇವನೆ ಮಾಡುವುದು ಉತ್ತಮ. ಕಾಳುಮೆಣಸಿನ ಪುಡಿ ಬೆರೆಸಿರುವ ಚಹಾ ಸೇವನೆಯಿಂದಾಗಿ ಗಂಟಲಿನಲ್ಲಿ ಕಿರಿ-ಕಿರಿ ಯಂತಹ ಸಮಸ್ಯೆಗಳಿಂದ ಬಹುಬೇಗ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಮಳೆಗಾಲದ ಸಮಯದಲ್ಲಿ ಈ ಕಾಳುಮೆಣಸಿನ ಚಹಾ ಸೇವನೆ ದೇಹದ ಆರೋಗ್ಯಕ್ಕೆ ಬಹಳ ಉತ್ತಮವಾದದ್ದು.