Advertisement

ಸರಕಾರಕ್ಕೆ ಕಂಪೆನಿಗಳಿಂದ ಟಿಡಿಎಸ್‌ ವಂಚನೆ

07:30 AM Mar 06, 2018 | Team Udayavani |

ಹೊಸದಿಲ್ಲಿ /ಮುಂಬಯಿ: ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಹಗರಣ ಬಹಿರಂಗವಾದ ಬೆನ್ನಿಗೇ 447 ಕಂಪೆನಿಗಳು ತನ್ನ ಉದ್ಯೋಗಿಗಳ ವೇತನ ಮೂಲದಿಂದ ಕಡಿತ (ಟಿಡಿಎಸ್‌) ಮಾಡಿದ 3,200 ಕೋಟಿ ರೂ.ಗಳ‌ನ್ನು ಸರಕಾರಕ್ಕೆ ಪಾವತಿಸದೆ ವಂಚಿಸಿದ ವಿಚಾರ ಬೆಳಕಿಗೆ ಬಂದಿದೆ.

Advertisement

ಆದಾಯ ತೆರಿಗೆ ಇಲಾಖೆಯ ಟಿಡಿಎಸ್‌ ವಿಭಾಗವೇ ಈ ವಿಚಾರ ಪತ್ತೆಹಚ್ಚಿದ್ದು, ಕೆಲವು ಕಂಪೆನಿಗಳ ವಿರುದ್ಧ ವಾರಂಟ್‌ ಹೊರಡಿಸಲಾಗಿದೆ. ಕಂಪೆನಿಗಳು ಆ ಮೊತ್ತವನ್ನು ವಿವಿಧ ವ್ಯಾಪಾರೋದ್ದೇಶಗಳಿಗೆ ಬಳಕೆ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದರೆ ಕಂಪೆನಿಗಳ ಆಡಳಿತ ಮಂಡಳಿಯವರಿಗೆ 3ರಿಂದ 7 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.

ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಸಂಸ್ಥೆ ಯೊಂದು ಉದ್ಯೋಗಿಗಳ ಸಂಬಳದಿಂದ 100 ಕೋಟಿ ರೂ. ಕಡಿತ ಮಾಡಿ ಅದನ್ನು ವ್ಯಾಪಾರೋದ್ದೇಶಕ್ಕೆ ಬಳಸಿಕೊಂಡಿದೆ. ಮೂಲ ಸೌಕರ್ಯ ಕ್ಷೇತ್ರದ ಮತ್ತೂಂದು ಕಂಪೆನಿ 14 ಕೋಟಿ ರೂ. ಮೊತ್ತವನ್ನು ಬೇರೊಂದು ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಹೇಳಲಾಗಿದೆ. 2017ರ ಎಪ್ರಿಲ್‌ನಿಂದ 2018ರ ಮಾರ್ಚ್‌ ವರೆಗಿನ ಅವಧಿಯಲ್ಲಿ ನಡೆದ ಬೆಳವಣಿಗೆ ಇದಾಗಿದೆ.

ಇ.ಡಿ. ವಶಕ್ಕೆ ನೀರವ್‌ ಬ್ಯಾಂಕ್‌ ವಿವರ: ಮತ್ತೂಂದು ಮಹಣ್ತೀದ ಬೆಳವಣಿಗೆಯಲ್ಲಿ ಪಿಎನ್‌ಬಿಗೆ ವಂಚಿಸಿ ಪರಾರಿಯಾಗಿರುವ ನೀರವ್‌ ಮೋದಿಯ ವಿದೇಶಿ ಬ್ಯಾಂಕ್‌ ಖಾತೆಯ ವಿವರ ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಸಿಕ್ಕಿದೆ. ಇನ್ನೂ ಹಲವು ವಿದೇಶಿ ಬ್ಯಾಂಕ್‌ಗಳಲ್ಲಿ ಅವರು ಖಾತೆ ಹೊಂದಿದ್ದಾರೆ ಎಂದು ಹೇಳಲಾಗಿರುವ ಮಾಹಿತಿಯನ್ನು ಇ.ಡಿ. ಕಲೆ ಹಾಕುತ್ತಿದೆ. ಇದರ ಜತೆಗೆ ನೀರವ್‌ ಮತ್ತು ಗೀತಾಂಜಲಿ ಜ್ಯುವೆಲ್ಲರ್ಸ್‌ ಪ್ರವರ್ತಕ ಮೆಹುಲ್‌ ಚೋಸ್ಕಿ ವಿರುದ್ಧ ಸಮಗ್ರ ವರದಿ ಸಿದ್ಧಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next