Advertisement

ಟಿಸಿಎಸ್‌ ಲಕ್ನೋ ಕಚೇರಿಗೆ ಬೀಗ? ಭೀತಿಯಲ್ಲಿ ನೌಕರರು

03:05 AM Jul 14, 2017 | Team Udayavani |

ಲಕ್ನೋ : ಭಾರತದ ಅತಿ ದೊಡ್ಡ ಹೊರಗುತ್ತಿಗೆ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ತನ್ನ ಲಕ್ನೋ ಕಚೇರಿ ಮುಚ್ಚಲು ಮುಂದಾಗಿದೆ. ಈ ವರ್ಷಾಂತ್ಯದ ವೇಳೆಗೆ ಟಿಸಿಎಸ್‌ ತನ್ನ 33 ವರ್ಷ ಹಳೆಯ ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲಿದ್ದು, ಸುಮಾರು 2000 ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಆರ್ಥಿಕ ಹಿಂಜರಿತ ಹಿನ್ನೆಲೆ ಲಕ್ನೋ ಕಚೇರಿಯನ್ನು ಮುಚ್ಚಲು ಕಂಪೆನಿ ನಿರ್ಧರಿಸಿದ್ದು, ಸಾವಿರಾರು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಕಂಪೆನಿಯ ಟೀಮ್‌ ಲೀಡರ್‌ಗಳು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿ ಮಧ್ಯಪ್ರವೇಶಿಸುವಂತೆ ಕೋರಲು ಉದ್ಯೋಗಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next