ನವ ದೆಹಲಿ : ಜೂನ್ ನಲ್ಲಿ ಕೊನೆಗೊಂಡ ತ್ರೈ ಮಾಸಿಕದಲ್ಲಿ ಲಾಭದ ಪ್ರಮಾಣವು ಶೇಕಡಾ 28.5 ರಷ್ಟು ಏರಿಕೆಯಾಗಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನ (ಟಿಸಿಎಸ್) ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಐಟಿ ಅಥವಾ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿಯಾಗಿರುವ ಟಿಸಿಎಸ್ ಜೂನ್ ನಲ್ಲಿ ಮುಕ್ತಾಯಗೊಂಡ ತ್ರೈ ಮಾಸಿಕದಲ್ಲಿ ಶೇಕಡಾ 28.5 ರಷ್ಟು ಲಾಭದ ಪ್ರಮಾಣವನನ್ನು ಗಳಿಸುವುದರೊಂದಿಗೆ, ಒಟ್ಟು ಕಂಪೆನಿಯ ನಿವ್ವಳ ಲಾಭ 9,008 ಕೋಟಿಯಷ್ಟು ಆಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಮಾಜಿ ಸಿಎಂ ಕುಮಾರ ಸ್ವಾಮಿ ವಿರುದ್ಧ ಗುಡುಗಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್
ಭಾರತದ ದೈತ್ಯ ಮಾಹಿತಿ ಮತ್ತು ತಂತ್ರಜ್ಞಾನ ವಲಯದ ದೈತ್ಯ ಕಂಪೆನಿಯಾಗಿರುವ ಟಿಸಿಎಸ್ ಹಿಂದಿನ ವರ್ಷದ ಇದೇ ತ್ರೈ ಮಾಸಿಕದಲ್ಲಿ ಸುಮಾರು 7,008 ಕೋಟಿಯಷ್ಟು ಲಾಭವನ್ನು ಗಳಿಸಿತ್ತು. ಕಳೆದ ವರ್ಷದ ಜೂನ್ ತ್ರೈ ಮಾಸಿಕದಲ್ಲಿ 38,322 ಕೋಟಿ ಆದಾಯ ಗಳಿಸಿದ್ದ ಕಂಪನಿಯು ಈ ವರ್ಷದ ಜೂನ್ ತ್ರೈ ಮಾಸಿಕದಲ್ಲಿ 45,411 ಕೋಟಿಯಷ್ಟು ಆದಾಯ ಗಳಿಸಿದೆ. ಇನ್ನು, ಕಂಪನಿಯ ಆದಾಯದಲ್ಲಿ ಶೇಕಡ 18.5 ರಷ್ಟು ಏರಿಕೆ ಆಗಿದೆ.
ಇನ್ನು, ಜೂನ್ ತ್ರೈ ಮಾಸಿಕದಲ್ಲಿ ಕಂಪೆನಿಯು ಒಟ್ಟು 20, 409 ಮಂದಿಯನ್ನು ಹೊಸದಾಗಿ ವಿವಿಧ ಹುದ್ದೆಗಳಿಗೆ ನೇಮಿಸಿಕೊಂಡಿದ್ದು, ಒಟ್ಟು ಟಿಸಿಎಸ್ ಸಂಸ್ಥೆಯ ನೌಕರರ ಸಂಖ್ಯೆ ಈಗ ಐದು ಲಕ್ಷಕ್ಕೂ ಹೆಚ್ಚಾಗಿದೆ.
ಇದನ್ನೂ ಓದಿ : ನಿರ್ಮಾಪಕ ಪುಷ್ಕರ್ ಗೆ ರಕ್ಷಿತ್ ನೀಡಿದ ಹಣವೇಷ್ಟು?ಯಾರಿಗೂ ಗೊತ್ತಿರದ ಸತ್ಯ ಬಿಚ್ಚಿಟ್ಟ ರಿಷಬ್