Advertisement

TB Dam: ಗ್ಯಾರಂಟಿಗಳಿಗೆ ಕೊಡುವ ಹಣದಲ್ಲಿ ನವಲಿ ಜಲಾಶಯ ನಿರ್ಮಾಣವಾಗ್ತಿತ್ತು: ಶೆಟ್ಟರ್‌

11:56 PM Aug 11, 2024 | Team Udayavani |

ಕೊಪ್ಪಳ: ಕಾಂಗ್ರೆಸ್‌ ಸರಕಾರದ  ಗ್ಯಾರಂಟಿಗಳ ನಿಭಾಯಿಸಲು ಖರ್ಚು ಮಾಡೋ  ಹಣದಲ್ಲಿ, ನವಲಿ ಜಲಾಶಯ ಮಾಡಿ ಅದರಿಂದ ಈ ಟಿಬಿ ಡ್ಯಾಂ ನೀರು  ಉಳಿಸಿಕೊಳ್ಳಬಹುದಿತ್ತು ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.

Advertisement

ತುಂಗಭದ್ರಾ ಜಲಾಶಯದಲ್ಲಿ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ  ಡ್ಯಾಂ ಖಾಲಿಯಿದ್ದಾಗ ಜಲಾಶಯ ನಿರ್ವಹಣೆ ಮಾಡೋಕೆ ಟೆಂಡರ್ ಕರೆಯಬೇಕಿತ್ತು ಆ ಕೆಲಸ ಸರಕಾರ ಮಾಡಿಲ್ಲ. ಸರಕಾರದ ನೀತಿಯಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಗ್ಯಾರಂಟಿ ಹಣದಲ್ಲಿ ನವಲಿ ಜಲಾಶಯ ನಿರ್ಮಿಸಿ  ನೀರು ಉಳಿಸಿಕೊಳ್ಳಬಹುದಿತ್ತು ಎಂದರು.

ಸರ್ಕಾರ ನಡೆಸಬೇಕಾದ್ರೆ ಒಂದು ಯೋಜನೆ ಇರಬೇಕು, ಆದ್ರೆ ಇಲ್ಲಿ ಯಾವುದೇ ಯೋಜನೆಯೂ ಇಲ್ಲ.  ಡಿಸಿಎಂ ಡಿ.ಕೆ. ಶಿವಕುಮಾರ್‌ ಇಲ್ಲಿ ಏನು ಆಗಿದೆ ಅಂತ ನೋಡ್ಕೊಂಡು ಹೋಗೋಕೆ ಬಂದಿದ್ದಾರೆ ಅಷ್ಟೆ ಸರ್ಕಾರದಲ್ಲಿ ಕುರ್ಚಿ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ. ಸರ್ಕಾರದ ಖಜಾನೆ ಖಾಲಿಯಾಗಿದೆ, ಹೀಗಾಗಿ ಇಂತಹ ಕಾಮಗಾರಿಗಳ ನಿರ್ವಹಣೆ ಮಾಡೋಕೆ ಆಗ್ತಿಲ್ಲ. ರಾಜ್ಯದಲ್ಲಿ ಇಂತಹ ಹಲವು ಉದಾಹರಣೆಗಳು ನಡೆದಿವೆ ಎಂದರು.

ರಾಜ್ಯ ಕಾಂಗ್ರೆಸ್‌ (ಅಂದಾದುನ್ನಿ) ಸರಕಾರ ಗ್ಯಾರಂಟಿಗಳ ನಿಭಾಯಿಸಲು ಹಣ ಸಂಗ್ರಹಣೆಯಲ್ಲಿ ತೊಡಗಿರುವುದರಿಂದ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ನಿರ್ವಹಣೆ ಮಾಡಲಾಗದೆ ಕ್ರಸ್ಟ್‌ಗೇಟ್‌ ಚೆ„ನ್‌ ಕಟ್ಟಾಗಲು ಕಾರಣವಾಗಿದೆ. ಸರಕಾರ, ಇಲಾಖಾ ಹಿರಿಯ ಅಧಿಕಾರಿಗಳು ಆರು ತಿಂಗಳ ಹಿಂದೆ ಅವುಗಳೆನ್ನಲ್ಲಾ ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರೆ ಇಂದು ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲಾ. ರೈತರು ಸಂಕಷ್ಟಸ್ಥಿತಿ ಎದುರಿಸಬೇಕಾಗಿದೆ. ಹಣವಿಲ್ಲದೆ ಕ್ರಸ್ಟ್‌ಗೇಟ್‌ ನಿರ್ವಹಣೆ ಮಾಡಲಾಗಲಿಲ್ಲ ಎಂದು ಅಧಿಕಾರಿಗಳಿಂದ ಉತ್ತರ ಬರುತ್ತೆ ಎಂದರು.

ನವಲಿ ಬಳಿ ಸಮಾನಾಂತರ ಡ್ಯಾಂ ನಿರ್ಮಾಣ ಸುಲಭವಲ್ಲ: ಎಂಬಿಪಾ
ವಿಜಯಪುರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ ಕಿತ್ತುಹೋದ ಪ್ರಕರಣದ ವಾಸ್ತವಿಕತೆ ಮಾಹಿತಿ ತಿಳಿಯದೇ ಮಾತನಾಡುವುದು ಸರಿಯಲ್ಲ. ಅಂತಾರಾಜ್ಯ ನೀರು ಹಂಚಿಕೆಯ ತುಂಗಭದ್ರಾ ನದಿಗೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ ಎಂದು ಕೈಗಾರಿಕೆ ಸಚಿವ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

Advertisement

ಪತ್ರಕರ್ತರ ಜತೆ ಮಾತನಾಡಿ, ಕ್ರಸ್ಟ್‌ಗೇಟ್‌ ಪ್ರಕರಣಕ್ಕೆ ತಾಂತ್ರಿಕವಾಗಿ ಕಾರಣವಾಗಿರುವ ಸಮಸ್ಯೆ ಬಗ್ಗೆ ತಿಳಿಯಬೇಕಿದೆ. ಯಾವ ಕಾರಣಕ್ಕೆ ಈ ಘಟನೆ ಆಗಿದೆ ಎನ್ನುವ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಪರಿಶೀಲಿಸುತ್ತಾರೆ. ಇಂತಹ ಅವಘಡ ಸಂದರ್ಭದಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಿದ್ದರೆ ನೀರು ಪೋಲು ಆಗುತ್ತಿರಲಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಸಮಾನಾಂತರ ಜಲಾಶಯ ನಿರ್ಮಾಣ ಅಂತಾರಾಜ್ಯ ಯೋಜನೆಯಾಗಿದೆ. ಕರ್ನಾಟಕ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next