Advertisement

ತೆರಿಗೆ ಉಳಿಸಿಕೊಂಡವರಿಗೆ ವಾರಂಟ್‌

11:51 AM Mar 10, 2017 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಕೋಟ್ಯಂತರ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಭಾವಿಗಳು, ಗಣ್ಯರು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ವಾರಂಟ್‌ ಜಾರಿ ಮಾಡುವ ಮೂಲಕ ಬಿಸಿ ಮುಟ್ಟಿಸಲು ಬಿಬಿಎಂಪಿ ಮುಂದಾಗಿದೆ.

Advertisement

ಹಲವು ವರ್ಷಗಳಿಂದಲೂ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸದೆ 170 ಕೋಟಿ ರೂ. ಬೃಹತ್‌ ಮೊತ್ತ ಬಾಕಿ ಉಳಿಸಿಕೊಂಡಿದ್ದ 75 ಪ್ರಭಾವಿ ಆಸ್ತಿದಾರರಿಗೆ  ಈಗಾಗಲೇ ಡಿಮ್ಯಾಂಡ್‌ ನೋಟಿಸ್‌ ನೀಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಇದೀಗ ವಾರಂಟ್‌ ಜಾರಿ ಮಾಡುವ ತೀರ್ಮಾನಕ್ಕೆ ಬರಲಾಗಿದೆ. ಅಚ್ಚರಿ ಎಂದರೆ, 170 ಕೋಟಿ ರೂ. ಆಸ್ತಿ ತೆರಿಗೆ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಕೆಲ ಸರ್ಕಾರಿ ಕಚೇರಿಗಳೂ ಇವೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಪೊಲೀಸ್‌ ಇಲಾಖೆಗಳಿಗೆ ಸೇರಿದ ಆಸ್ತಿಗಳಿಂದಲೂ ತೆರಿಗೆ ಪಾವತಿಯಾಗಿಲ್ಲ.

ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿದಾರ­ರರು ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ತೆರಿ­ಗೆಯೇ ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿದೆ.  ಈ ವಿಚಾರದಲ್ಲಿ  ವಲಯವಾರು ಕಾರ್ಯಾ­ಚರಣೆ ನಡೆಸಿ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಿದರೂ ಆಸ್ತಿದಾರರು ಸ್ಪಂದಿಸುತ್ತಿಲ್ಲ. ಹೀಗಾಗಿ, ಅವರ ವಿರುದ್ಧ ವಾರಂಟ್‌ ಜಾರಿಗೊಳಿಸಿ ಮನೆ, ಕಟ್ಟಡ, ವಾಣಿಜ್ಯ ಸಂಕೀರ್ಣ, ಕಂಪನಿ ಮುಂಭಾಗ “ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿ­ಕೊಳ್ಳಲಾಗಿದೆ’ ಎಂಬ ಫ‌ಲಕಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.

ಪಾಲಿಕೆಯ ಎಂಟೂ ವಲಯಗಳಲ್ಲಿ 75 ಆಸ್ತಿ ಮಾಲೀಕರಿಂದಲೇ 170 ಕೋಟಿ ರೂ. ಬಾಕಿ ತೆರಿಗೆ ಸಂಗ್ರಹವಾಗಬೆಕಿದೆ. ಈ ಪೈಕಿ ದಕ್ಷಿಣ ಹಾಗೂ ಬೊಮ್ಮನಹಳ್ಳಿ ಎರಡು ವಲಯಗಳಿಂದಲೇ 70ಕೋಟಿ ರೂ. ಸಂಗ್ರಹವಾಗಬೇಕಿದೆ. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಜಿಐಎಸ್‌ ಮೂಲಕ 16 ರಿಂದ 18 ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಗುರುತಿ­ಸಲಾಗಿದೆ. ಆದರೆ, ಪಾಲಿಕೆಗೆ ತೆರಿಗೆ ಪಾವತಿಯಾ­ಗುತ್ತಿರುವುದು 14 ಲಕ್ಷ ಆಸ್ತಿಗಳಿಂದ ಮಾತ್ರ.  ಈ ಹಿನ್ನೆಲೆಯಲ್ಲಿ ಈಗಾಗಲೆ ವಲಯವಾರು ಆಸ್ತಿ ಬಾಕಿ ಉಳಿಸಿಕೊಂಡಿರುವವರ ಹಾಗೂ ಆಸ್ತಿ ತೆರಿಗೆ ವ್ಯಾಪ್ತಿ­ಯಿಂದ ಹೊರಗುಳಿದವರನ್ನು ಗುರುತಿಸಿ ಪಟ್ಟಿ ಮಾಡಿರುವ ಅಧಿಕಾರಿಗಳು ವಾರಂಟ್‌ ಜಾರಿ­ಗೊಳಿಸಲು ಮುಂದಾಗಿದ್ದಾರೆ.  

Advertisement

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರು 
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಬಿಎಂಟಿಸಿ, ಬೆಂಗಳೂರು ಗೃಹ ನಿರ್ಮಾಣ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿಗಮ, ತಂಗ್ಲಿನ್‌ ಡೆವಲಪ್‌ಮೆಂಟ್ಸ್‌ ಲಿಮಿಟೆಡ್ಸ್‌, ಬಾಲ್‌ ಟೂರಿಸ್ಟ್‌ ಹೋಟೆಲ್‌, ಟೊಪಝ್ ಇನ್‌ವೆಸ್ಟ್‌ಮೆಂಟ್‌ ಪ್ರ„ವೇಟ್‌ ಲಿುಟೆಡ್‌, ಬ್ರಿಗೇಡ್‌ ಎಂಟರ್‌ಪ್ರ„ಸೆಸ್‌ ಲಿಮಿಟೆಡ್‌, ಲೀಲಾ ಸ್ಕೋಟಿಷ್‌ ಲಸಿ ಪ್ರ„ವೇಟ್‌ ಲಿಮಿಟೆಡ್‌, ವಿವೇಕನಗರ ಪೊಲೀಸ್‌ ವಸತಿ ಸಂಕೀರ್ಣ, ಸೆಂಚುರಿ ಗ್ಯಾಲಕ್ಸಿ ಡೆವಲಪರ್ ಪ್ರ„ವೇಟ್‌ ಲಿಮಿಟೆಡ್‌, ಸೆಂಚುರಿ ಕೊರ್ಬೆಲ್‌, ವಿಮ್ಸ ಆಸ್ಪತ್ರೆ, ಮಪೆಲ್‌ ಹೋಟೆಲ್‌ ಡೊಜೆಲ್‌ ಬಿಲ್ಡ್‌ ವೆಲ್‌ ಪ್ರ„ವೇಟ್‌ ಲಿುಟೆಡ್‌, ಯುನೈಟೆಡ್‌ ಗ್ಲಾಸ್‌ ಬಾಟೆಲ್ಸ್‌ ಮ್ಯಾನುಫ್ಯಾಕ್ಚರ್‌ ಕಂಪನಿ ಲಿಮಿಟೆಡ್‌. 

ದಾಖಲೆಯ ತೆರಿಗೆ ಸಂಗ್ರಹ
ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 2016-17 ನೇ ಸಾಲಿನಲ್ಲಿ 2025 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ಸಾಲಿನಲ್ಲಿ 1900 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿಯ ಸಂಗ್ರಹ ದಾಖಲೆಯಾಗಿದೆ. 

ಪಾಲಿಕೆಗೆ ಹೆಚ್ಚಿನ ಪ್ರಮಾಣ­ದಲ್ಲಿ ಬಾಕಿ ಉಳಿಸಿ ಕೊಂಡಿರುವ ಆಸ್ತಿದಾರರ ವಿರುದ್ಧ ವಾರಂಟ್‌ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದು, ಆಸ್ತಿದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ನೋಟಿಸ್‌ ನೀಡಿದ ನಂತರವೂ ತೆರಿಗೆ ಪಾವತಿಗೆ ಮುಂದಾಗದಿದ್ದರೆ ವಾರಂಟ್‌ ಜಾರಿಗೊಳಿಸಿ, ಸ್ಥಿರಾಸ್ತಿಗಳನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 
-ಎನ್‌. ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

 * ವೆಂ. ಸುನಿಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next