Advertisement

ಸಿರಿವಂತ ರೈತರಿಗೆ ತೆರಿಗೆ ಹೊರೆ? ಕೇಂದ್ರ ಸರಕಾರದಿಂದ ಚಿಂತನೆ

11:27 PM Apr 08, 2022 | Team Udayavani |

ಹೊಸದಿಲ್ಲಿ: ಎಲ್ಲವೂ ಅಂದುಕೊಂಡಂತಾದರೆ ಶೀಘ್ರದಲ್ಲೇ ದೇಶದಲ್ಲಿರುವ ಸಿರಿವಂತ ರೈತರ ಮೇಲೆ ತೆರಿಗೆ ಹೊರೆ ಬೀಳುವುದು ಖಚಿತ.

Advertisement

ಸದ್ಯ ಕೇಂದ್ರ ಸರಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ವಾರ್ಷಿಕವಾಗಿ 10 ಲಕ್ಷ ರೂ.ಗಳಿಗಿಂತ ಹೆಚ್ಚು ಗಳಿಸುತ್ತಿರುವ ರೈತರ ಮೇಲೆ ತೆರಿಗೆ ಹಾಕುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ವಿಚಾರ ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮುಂದೆ ಹೋಗಿದ್ದು, ಇದು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

ಈವರೆಗೆ ದೇಶದ ಯಾವುದೇ ರೈತರಿಗೂ ತೆರಿಗೆ ವಿಧಿಸಲಾಗುತ್ತಿಲ್ಲ. ಅಂದರೆ ರೈತಾಪಿ ಉತ್ಪನ್ನದಿಂದ ಬರುವ ಆದಾಯಕ್ಕೆ ತೆರಿಗೆ ರಿಯಾಯಿತಿ ನೀಡಲಾಗಿದೆ. ಆದರೆ ವಾರ್ಷಿಕವಾಗಿ 10 ಲಕ್ಷ ರೂ.ಗಿಂತ ಹೆಚ್ಚು ಗಳಿಸುವವರಿಗೆ ಏಕೆ ತೆರಿಗೆ ವಿಧಿಸಬಾರದು ಎಂಬ ಚಿಂತನೆಯೂ ಈಗ ಶುರುವಾಗಿದೆ. ಆದರೆ ಆದಾಯ ತೆರಿಗೆ ಇಲಾಖೆಯಲ್ಲಿ ಇದಕ್ಕೆ ಬೇಕಾದ ಮಾನವ ಸಂಪನ್ಮೂಲವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.

ಗುರುತಿಸುವುದು ಹೇಗೆ?: ವಿಚಿತ್ರವೆಂದರೆ ಈಗ ಕೇಂದ್ರ ಸರಕಾರ ಸಿರಿವಂತ ಶ್ರೀಮಂತರಿಗೆ ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ. ಆದರೆ, ಸಿರಿವಂತ ರೈತರನ್ನು ಗುರುತಿಸುವುದು ಹೇಗೆ ಎಂಬುದಕ್ಕೆ ಯಾವುದೇ ಮಾನದಂಡಗಳಿಲ್ಲ. ಕಳೆದ ವರ್ಷ ಸಂಸತ್‌ನಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಈ ಬಗ್ಗೆ ಮಾಹಿತಿ ನೀಡಿದ್ದರು. ರೈತರಲ್ಲಿ ಬಡವರು ಯಾರು, ಸಿರಿವಂತರು ಯಾರು ಎಂಬುದನ್ನು ಗುರುತಿಸುವುದು ಕಷ್ಟಕರ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next