Advertisement
ಬಳಕೆದಾರರ ಸ್ನೇಹಿಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ. ಐಟಿಆರ್ ಪ್ರಿಪರೇಷನ್ ಎಂಬ ಉಚಿತ ಸಾಫ್ಟ್ವೇರ್ ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ಲಭ್ಯವಿದೆ. ಅದರ ಸಹಾಯದಿಂದ ಅರ್ಜಿದಾರರು ಖುದ್ದಾಗಿ ತೆರಿಗೆ ರಿಟರ್ನ್ಸ್ ಗೆ ಅರ್ಜಿ ಸಲ್ಲಿಸಬಹುದು. ಇದರಿಂದ, ಐಟಿಆರ್ ಅರ್ಜಿ ಸಲ್ಲಿಕೆಯನ್ನು ಬೇರೊಬ್ಬರ ಬಳಿ ಮಾಡಿ ಅವರಿಗೆ ಶುಲ್ಕ ನೀಡುವುದು ತಪ್ಪುತ್ತದೆ.
ಐಟಿಆರ್ ಪ್ರಿಪರೇಷನ್ ಸಾಫ್ಟ್ ವೇರ್‌ನಿಂದ ಐಟಿಆರ್ 1, 4 ಅರ್ಜಿಗಳನ್ನು ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ತುಂಬಬಹುದು. ಐಟಿಆರ್ 2 ಅರ್ಜಿಯನ್ನು ಆಫ್ಲೈನ್‌ನಲ್ಲಿ ತುಂಬಬಹುದು. ಸದ್ಯದಲ್ಲೇ ಐಟಿಆರ್ 3,5,6,7 ಅರ್ಜಿಗಳನ್ನು ತುಂಬುವ ಸಾಫ್ಟ್ ವೇರ್ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ. ತೆರಿಗೆ ತುಂಬಲು ನಾನಾ ದಾರಿ
ತೆರಿಗೆದಾರರು ಸರಕಾರಕ್ಕೆ ಸಲ್ಲಿಸಬೇಕಿರುವ ತೆರಿಗೆಯನ್ನು ನೆಟ್‌ಬ್ಯಾಂಕಿಂಗ್ ಮೂಲಕ ತುಂಬಲು ಅವಕಾಶ ಕಲ್ಪಿಸಲಾಗಿದೆ. ಅದರ ಜೊತೆಗೆ, ಯುಪಿಐ, ಕ್ರೆಡಿಟ್ ಕಾರ್ಡ್, ಆರ್‌ಟಿಜಿಎಸ್/ಎನ್‌ಇಎಫ್ಟಿ ಮಾರ್ಗಗಳ ಮೂಲಕವೂ ತೆರಿಗೆ ತುಂಬಬಹುದು.
Related Articles
ಅರ್ಜಿ ಅಪ್‌ಲೋಡಿಂಗ್, ಟ್ರ್ಯಾಂಕಿಂಗ್, ಅರ್ಜಿಗಳ ಸದ್ಯದ ಸ್ಥಿತಿ-ಗತಿ… ಇವೆಲ್ಲವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಡಿ ಗಮನಿಸಬಹುದು. ಇದರಿಂದ, ತೆರಿಗೆದಾರರ ಸಮಯ ಉಳಿತಾಯವಾಗುತ್ತದೆ.
Advertisement
ವಿಚಾರ ವಿನಿಮಯಕ್ಕೆ ಅವಕಾಶರಿಟರ್ನ್ಸ್ ಸಲ್ಲಿಕೆಯಲ್ಲಿ ಗೊಂದಲವಿದ್ದರೆ, ವೆಬ್‌ಸೈಟ್‌ನ ಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್ಎಕ್ಯು) ಎಂಬ ಟ್ಯಾಬ್ ನಿಮ್ಮ ಸಹಾಯಕ್ಕೆ ಬರುತ್ತದೆ. ಇದೇ ಅಂಶಗಳುಳ್ಳ ವೀಡಿಯೋ ಕ್ಲಿಪ್ ಇದೆ. ಟುಟೋರಿಯಲ್‌ಗಳಿವೆ, ಗ್ರಾಹಕರ ಸೇವಾ ಸಂಖ್ಯೆಗಳಿವೆ ಹಾಗೂ ತಜ್ಞರೊಂದಿಗೆ ನೇರವಾಗಿ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಚಾಟ್‌ಬಾಕ್ಸ್ ಅನುಕೂಲವಿದೆ. ಗಮನಿಸಬೇಕಾದ ಅಂಶಗಳು:
– ಟಿಡಿಎಸ್, ಎಸ್‌ಎಫ್ಟಿ ದಾಖಲೆಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗಲಿದ್ದು, ಆನಂತರವಷ್ಟೇ ತೆರಿಗೆ ಪಾವತಿಗೆ ಜೂ. 18ರ ನಂತರ ಅವಕಾಶ ಸಿಗಲಿದೆ.
– ಸದ್ಯದಲ್ಲೇ ಈ ವೆಬ್‌ಸೈಟ್‌ನ ಮೊಬೈಲ್ ಆ್ಯಪ್ ಕೂಡ ಲಭ್ಯವಾಗಲಿದ್ದು, ಅದನ್ನೂ ಬಳಕೆದಾರರ ಸ್ನೇಹಿಯನ್ನಾಗಿ ಮಾರ್ಪಾಟು ಮಾಡಿ ಮೊಬೈಲ್ ಮೂಲಕವೇ ತೆರಿಗೆ ಸಲ್ಲಿಸುವಂಥ ಸರಳ ಅವಕಾಶ ಮಾಡಿಕೊಡಲಾಗುತ್ತದೆ.