Advertisement
ಮಹಾನಗರದ ಸ್ವಚ್ಛತೆ ದೃಷ್ಟಿಯಿಂದ ಖಾಲಿ ನಿವೇಶನಗಳ ಸ್ವಚ್ಛತೆಗೆ ಮುಂದಾದಾಗ ಕರ ವಂಚಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪಾಲಿಕೆ ದಾಖಲೆಗಳ ಪ್ರಕಾರ ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 90 ಸಾವಿರ ಖಾಲಿ ನಿವೇಶನಗಳಿವೆ. ಇದೇ ಪಟ್ಟಿ ಹಿಡಿದು ನಮ್ಮ ನಗರ ಸ್ವಚ್ಛ ನಗರ ಅಭಿಯಾನಕ್ಕಾಗಿ ಖಾಲಿ ನಿವೇಶನ ಹುಡುಕಲು ಹೊರಟ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ. ವಾಸದ ಮನೆ, ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿರುವುದು ಬಯಲಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಅವರು ಅಭಿಯಾನದ ಜೊತೆಗೆ ತೆರಿಗೆ ವಂಚಿಸಿದ ಆಸ್ತಿಗಳ ಸಮೀಕ್ಷೆ ನಡೆಸಲು ಸೂಚಿಸಿದ್ದರು. ವಾರ್ಡ್‌ಗೊಬ್ಬ ನೋಡಲ್ ಅಧಿಕಾರಿ ನಿಯೋಜಿಸಿ ಗುರುತಿಸುವ ಕೆಲಸ ನಡೆಯುತ್ತಿದೆ.
Related Articles
Advertisement
ಕೊನೆ ಹನಿ: ಈ ಹಿಂದೆ ಖಾಲಿ ನಿವೇಶನಗಳ ಸ್ವಚ್ಛತೆ ಕಾರ್ಯ ನಡೆದಿತ್ತಾದರೂ ತೆರಿಗೆ ವಂಚಿಸಿದ ಆಸ್ತಿ ಗುರುತಿಸಿ ದಂಡ ಸಮೇತ ವಸೂಲಿ ಮಾಡುವ ಕೆಲಸಗಳು ಆಗಲಿಲ್ಲ. ಆದರೆ ಇಂದಿನ ಆಯುಕ್ತ ಡಾ| ಗೋಪಾಲಕೃಷ್ಣ ಅವರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಆಳವಾದ ಸಮೀಕ್ಷೆ ನಡೆಯುತ್ತಿದ್ದು, ಇದರ ಮೂಲಕ ತೆರಿಗೆ ವೃದ್ಧಿಸುವ ಕಾರ್ಯ ಆಗುತ್ತಿದೆ. ತೆರಿಗೆ ವಂಚಿಸಿದವರಿಂದ ದಂಡ ಸಮೇತ ವಸೂಲಿ ಮಾಡಿದಂತೆ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ಮೇಲೂ ಕ್ರಮವಾದರೆ ಉಳಿದವರಿಗೆ ಪಾಠವಾಗಲಿದೆ.
ಆಸ್ತಿ ತೆರಿಗೆ ಇಂದಲ್ಲ ನಾಳೆ ಪಾವತಿ ಮಾಡಲೇಬೇಕು. ಯಾವುದೇ ಕಾರಣಕ್ಕೂ ಕರ ಪಾವತಿ ಮಾಡದಿರಲು ಸಾಧ್ಯವಿಲ್ಲ. ವಿಳಂಬವಾದಂತೆಲ್ಲಾ ದಂಡದ ಪ್ರಮಾಣ ಹೆಚ್ಚಾಗುತ್ತದೆ. ಸಕಾಲಕ್ಕೆ ತೆರಿಗೆ ಪಾವತಿ ಮಾಡಿ ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರು ಕೈ ಜೋಡಿಸಬೇಕು. ತೆರಿಗೆಯಿಂದ ಹೊರಗುಳಿದಿರುವ ಆಸ್ತಿಗಳನ್ನು ಗುರುತಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ಕರ ಪಾವತಿ ಮಾಡಲು ಹಿಂದೇಟು ಹಾಕಿದರೆ ಕೆಎಂಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. –ಡಾ| ಬಿ.ಗೋಪಾಲಕೃಷ್ಣ, ಆಯುಕ್ತರು, ಮಹಾನಗರ ಪಾಲಿಕೆ
ʼನಮ್ಮ ನಗರ ಸ್ವಚ್ಛ ನಗರ’ ಅಭಿಯಾನ ಕೈಗೊಂಡಾಗ ತೆರಿಗೆ ವಂಚಿಸಿದ ಆಸ್ತಿಗಳು ಬೆಳಕಿಗೆ ಬಂದವು. ಆಯುಕ್ತರು ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಮೀಕ್ಷೆಗೆ ಸೂಚಿಸಿದ್ದರ ಪರಿಣಾಮ ಇಲ್ಲಿಯವರೆಗೆ ಇಷ್ಟೊಂದು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ. ಪಾಲಿಕೆ ನಿಯಮಗಳ ಪ್ರಕಾರವೇ ಚಲನ್ ನೀಡಿ ಕರ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ಡಿಮ್ಯಾಂಡ್ ಕ್ರಿಯೇಟ್ ಮಾಡಿದ ತೆರಿಗೆಯನ್ನು ವಸೂಲು ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡಗಳು ಕೆಲಸ ಮಾಡುತ್ತಿವೆ. –ಆನಂದ ಕಲ್ಲೋಳಿಕರ, ಉಪ ಆಯುಕ್ತ, ಕಂದಾಯ ವಿಭಾಗ
-ಹೇಮರಡ್ಡಿ ಸೈದಾಪುರ