Advertisement
ಕೇಂದ್ರ ಸರಕಾರದ ನಿರ್ಧಾರವೇನು?ದೇಶಾದ್ಯಂತ ಈಗ ಹಬ್ಬಗಳ ಋತು. ಹಾಗೆಯೇ, ಇನ್ನೇನು ಕೆಲವೇ ತಿಂಗಳುಗಳಲ್ಲಿ ನಾಲ್ಕೈದು ರಾಜ್ಯಗಳ ಚುನಾವಣೆ ಬೇರೆ ಇದೆ. ಹೀಗಾಗಿ ಕೇಂದ್ರ ಸರಕಾರ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡುವ ಅನಿವಾರ್ಯ ಸ್ಥಿತಿಯಲ್ಲಿದೆ. ಹೀಗಾಗಿಯೇ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಆಮದು ಮಾಡಿಕೊಳ್ಳುವ ಸೂರ್ಯಕಾಂತಿ, ತಾಳೆ ಎಣ್ಣೆ ಮತ್ತು ಸೋಯಾಬಿನ್ ಕಚ್ಚಾ ತೈಲದ ಮೇಲಿನ ಸುಂಕ ಮತ್ತು ಕೃಷಿ ಸೆಸ್ ಅನ್ನು ರದ್ದು ಮಾಡಿದ್ದಾರೆ.
ದೇಶದಲ್ಲಿ ವಾರ್ಷಿಕವಾಗಿ 20-21 ಮಿಲಿಯನ್ ಟನ್‌ಗಳಷ್ಟು ಖಾದ್ಯ ತೈಲವನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ 4-15 ಮೆಟ್ರಿಕ್ ಟನ್‌ಗಳಷ್ಟು ಖಾದ್ಯ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಚೀನ ಬಿಟ್ಟರೆ ಭಾರತವೇ ಅತೀ ಹೆಚ್ಚು ಖಾದ್ಯ ಆಮದು ಮಾಡಿಕೊಳ್ಳುವ ದೇಶವಾಗಿದೆ. ಅಂದರೆ ಚೀನ 34-35 ಮೆಟ್ರಿಕ್ ಟನ್‌ಗಳಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತ ಅತಿ ಹೆಚ್ಚು ಎಂದರೆ ತಾಳೆಎಣ್ಣೆಯನ್ನು ಶೇ. 45ರಷ್ಟು ಆಮದು ಮಾಡಿಕೊಳ್ಳುತ್ತದೆ. ಇದನ್ನು ಮಿಠಾಯಿ, ನಮ್‌ಕಿನ್‌ಗೆ ಬಳಕೆ ಮಾಡಲಾಗುತ್ತದೆ. ಇದನ್ನು ಬಿಟ್ಟರೆ ಸೋಯಾಬಿನ್ ಶೇ. 20, ಸಾಸಿವೆ ಶೇ.10 ಆಮದು ಮಾಡಿಕೊಂಡರೆ, ಉಳಿದ ಪಾಲು ಶೇಂಗಾ, ಸೂರ್ಯಕಾಂತಿ, ಹತ್ತಿ ಕಾಳಿನ ಎಣ್ಣೆಯದ್ದಾಗಿದೆ. ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು
Related Articles
ಮಲೇಷ್ಯಾ, ಬ್ರೆಜಿಲ್, ಅರ್ಜೆಂಟೀನಾ ಮತ್ತು ಇಂಡೋನೇಷ್ಯಾ.ನಿಜಕ್ಕೂ ಬೆಲೆ ಕಡಿಮೆಯಾಗುತ್ತದೆಯೇ? ಸದ್ಯ ದೇಶದಲ್ಲಿ 130 ರೂ.ಗಳಿಂದ 190 ರೂ.ಗಳ ವರೆಗೆ ಪ್ರತಿ ಲೀಟರ್ ಎಣ್ಣೆಗೆ ಬೆಲೆ ಇದೆ. ಆಮದು ಸುಂಕ ಮತ್ತು ಕೃಷಿ ಸೆಸ್ ರದ್ದು ಮಾಡಿದ್ದರಿಂದ 5ರಿಂದ 8 ರೂ.ನಷ್ಟು ಬೆಲೆ ಕಡಿಮೆಯಾಗಬಹುದು. ಆದರೆ ಇಲ್ಲಿ ಆಮದು ಸುಂಕ ಇಳಿಸಿದ ತತ್‌ಕ್ಷಣ ಮಲೇಷ್ಯಾ ಮಾರುಕಟ್ಟೆಯಲ್ಲಿ 150 ರಿಂದ 170 ಆರ್‌ಎಂನಷ್ಟು ಏರಿಕೆಯಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಖಾದ್ಯ ತೈಲದ ಬೆಲೆ ಹೆಚ್ಚಾಗಿರುವುದರಿಂದ ಸದ್ಯ ಇಲ್ಲಿ ಬೆಲೆ ಕಡಿಮೆಯಾಗುವುದು ಕಷ್ಟ ಎಂದು ತಜ್ಞರು ಹೇಳುತ್ತಾರೆ.
Advertisement