Advertisement
ಬಾಂಗ್ಲಾದೇಶ, ಲಾವೋಸ್, ಶ್ರೀಲಂಕಾ, ದಕ್ಷಿಣ ಕೊರಿಯಾಗಳಿಗೂ ಈ ನಿಯಮ ಅನ್ವಯವಾಗಲಿದೆ. ರಾಸಾಯನಿಕ, ಕೃಷಿ ಉತ್ಪನ್ನಗಳು, ವೈದ್ಯಕೀಯ ವಸ್ತುಗಳು, ಜವಳಿ ಉತ್ಪನ್ನಗಳು, ಸ್ಟೀಲ್ ಮತ್ತು ಅಲ್ಯುಮಿನಿಯಂ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಲು ಚೀನಾ ಮುಂದಾಗಿದೆ. ಅಮೆರಿಕದಿಂದ ಚೀನಾಕ್ಕೆ ಬರುವ ಸೋಯಾ ಉತ್ಪನ್ನಗಳಿಗೆ ಹೆಚ್ಚಿನ ತೆರಿಗೆ ನೀಡಬೇಕಾಗುತ್ತದೆ. ಹೀಗಾಗಿ, ಭಾರತದಿಂದ ತರಿಸುವ ಉತ್ಪನ್ನಗಳಿಗೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸಲು ಚೀನಾ ನಿರ್ಧರಿಸಿದೆ. ಮಾಹಿತಿ ತಂತ್ರಜ್ಞಾನ, ಔಷಧೋದ್ಯಮ ಕ್ಷೇತ್ರಗಳಲ್ಲಿ ತನ್ನ ವಸ್ತುಗಳಿಗೆ ಮಾರಾಟಕ್ಕೆ ಅನುಮೋದನೆ ನೀಡುವಂತೆ ಚೀನಾದ ಮೇಲೆ ಭಾರತ ಒತ್ತಡ ಹೇರುತ್ತಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕಿರಿಕಿರಿಯಿಂದ ಬೇಸತ್ತ ಹಾರ್ಲೆ-ಡೇವಿಡ್‌ಸನ್ ಐಶಾರಾಮಿ ಬೈಕ್ ಕಂಪನಿ ಅಮೆ ರಿಕದ ವಿಸ್ಕಾನ್ಸಿನ್‌ನಲ್ಲಿ ರುವ ತನ್ನ ಬೈಕ್ ತಯಾರಿಕಾ ಘಟಕದಿಂದ ಕೆಲ ಬಿಡಿ ಭಾಗಗಳ ತಯಾರಿಕಾ ಘಟಕಗಳನ್ನು ಬೇರೆ ದೇಶಕ್ಕೆ ವರ್ಗಯಿಸಲು ನಿರ್ಧರಿಸಿದೆ. ಜತೆಗೆ, ಐರೋಪ್ಯ ದೇಶಗಳು ಬೈಕ್‌ನ ಬಿಡಿ ಭಾಗದ ಮೇಲೆ ಅಧಿಕ ತೆರಿಗೆ ಹಾಕುತ್ತಿರುವುದೂ ಈ ನಿರ್ಧಾರಕ್ಕೆ ಕಾರಣ. ಈ ಕಂಪನಿಯ ಬಿಡಿ ಭಾಗಗಳ ಮೇಲೆ ಭಾರತ ಹೇರಿರುವ ಅಧಿಕ ತೆರಿಗೆ ವಿಚಾರ ವ್ಯಾಪಾರ ಸಮರಕ್ಕೆ ಕಾರಣವಾದ ಬೆನ್ನಲ್ಲೇ ಈ ಘಟನೆ ನಡೆದಿದೆ. ಕಂಪನಿಯ ನಿರ್ಧಾರದಿಂದ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ.