Advertisement

ದೀಪಾವಳಿ ಪ್ರಯುಕ್ತ ತತ್ಕಾಲ್‌ ವಿಶೇಷ ರೈಲು

06:10 AM Nov 08, 2018 | |

ಹುಬ್ಬಳ್ಳಿ: ದೀಪಾವಳಿ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ಒದಗಿಸಲಿದೆ. ಯಶವಂತಪುರ-ಹುಬ್ಬಳ್ಳಿ ತತ್ಕಾಲ್‌ ಎಕ್ಸ್‌ಪ್ರೆಸ್‌ (06583) ರೈಲು ನ.11ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 2:35ಕ್ಕೆ ಹುಬ್ಬಳ್ಳಿಗೆ ಬರಲಿದೆ. 

Advertisement

ಒಂದು ಟ್ರಿಪ್‌ ಮಾತ್ರ ಸಂಚರಿಸುವ ರೈಲು ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರ, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಸಂಚರಿಸಲದೆ.

ತತ್ಕಾಲ್‌ ಎಕ್ಸ್‌ಪ್ರೆಸ್‌:ಹುಬ್ಬಳ್ಳಿ-ಯಲಹಂಕ ಮಧ್ಯೆ (ಹೊಸಪೇಟೆ ಮಾರ್ಗವಾಗಿ) ವಿಶೇಷ ತತ್ಕಾಲ್‌( 06584) ರೈಲು ಸೇವೆ ಕಲ್ಪಿಸಲಾಗುವುದು. ರೈಲು ನ.11ರಂದು ಸಂಜೆ 4:45ಕ್ಕೆ ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸಲಿದ್ದು, ಯಲಹಂಕ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 8 ಗಂಟೆಗೆ ಬಂದು ಸೇರಲಿದೆ. ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ರಾಯದುರ್ಗ, ಚಿತ್ರದುರ್ಗ, ಚಿಕ್ಕಜಾಜೂರ, ಕಡೂರ, ಅರಸಿಕೆರೆ, ತುಮಕೂರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಬೋಗಿಗಳ ಸೇರ್ಪಡೆ: ದೀಪಾವಳಿ ಪ್ರಯುಕ್ತ ಕೆಲವು ರೈಲುಗಳಿಗೆ ತಾತ್ಕಾಲಿಕವಾಗಿ ಬೋಗಿ ಜೋಡಿಸಲಾಗುವುದು. ಬೆಂಗಳೂರು ನಗರ-ಹುಬ್ಬಳ್ಳಿ ಜನಶತಾಬ್ದಿ (1207912080) ರೈಲಿಗೆ ನ.11ರವರೆಗೆ ಒಂದು ಚೇರ್‌ ಕಾರ್‌ ಜೋಡಿಸಲಾಗುವುದು. ಹುಬ್ಬಳ್ಳಿ-ಚೆನ್ನೈ ಎಕ್ಸ್‌ಪ್ರೆಸ್‌ (22697/22698) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೈರ್‌ ದ್ವಿತೀಯ ದರ್ಜೆ ಸ್ಲಿàಪರ್‌ ಕೋಚ್‌ ಜೋಡಿಸಲಾಗುವುದು. ಬೆಂಗಳೂರು ನಗರ-ಕೊಲ್ಹಾಪುರ (16589/16590) ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲಿಗೆ ನ.11ರವರೆಗೆ ಒಂದು 3 ಟೈರ್‌ ದ್ವಿತೀಯ ದರ್ಜೆ ಸ್ಲಿàಪರ್‌ ಕೋಚ್‌ ಅಳವಡಿಸಲಾಗುವುದು. ಮೈಸೂರು-ತಾಳಗುಪ್ಪ (16227/16228) ರೈಲಿಗೆ ನ.9ರಿಂದ ನ.12ವರೆಗೆ ಒಂದು 3-ಟೈರ್‌ ದ್ವಿತೀಯ ದರ್ಜೆ ಸ್ಲಿàಪರ್‌ ಕೋಚ್‌ ಜೋಡಿಸಲಿದೆ.

ಮೈಸೂರು-ಧಾರವಾಡ ಎಕ್ಸ್‌ಪ್ರೆಸ್‌ (17301/17302)ರೈಲಿಗೆ ನ.10ರವರೆಗೆ ಒಂದು 3-ಟೀರ್‌ ದ್ವಿತೀಯ ದರ್ಜೆ ಸ್ಲಿàಪರ್‌ ಕೋಚ್‌ ಅಳವಡಿಸಲಾಗುವುದು. ಮೈಸೂರು-ಸೊಲ್ಲಾಪುರ ಗೋಲ್‌ಗ‌ುಂಬಜ್‌ ಎಕ್ಸ್‌ಪ್ರೆಸ್‌ (16535/16536) ರೈಲಿಗೆ ನ.12ರವರೆಗೆ ಒಂದು 3-ಟೀರ್‌ ದ್ವಿತೀಯ ದರ್ಜೆ ಸ್ಲಿàಪರ್‌ ಕೋಚ್‌ ಜೋಡಿಸಲಾಗುವುದು. ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್‌ (16591) ರೈಲಿಗೆ ನ.10 ಹಾಗೂ ನ.11ರಂದು ಒಂದು 3-ಟೀರ್‌ ಎಸಿ ಕೋಚ್‌ ಜೋಡಿಸಲು ನಿರ್ಧರಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next