Advertisement

ಕಣಿಪುರ ದೇಗುಲಕ್ಕೆ ಪುತ್ತೂರಿನ ತಟ್ಟಿರಾಯ

12:55 AM Feb 07, 2019 | Harsha Rao |

ಪುತ್ತೂರು: ಕಾಸರಗೋಡಿನ ಕುಂಬ್ಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪುತ್ತೂರಿನಲ್ಲಿ ತಟ್ಟಿರಾಯ ನಿರ್ಮಿಸಲಾಗಿದೆ.
ಬೊಳುವಾರು ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್‌ ವಿಶ್ವಕರ್ಮ ಅವರ ನೇತೃತ್ವದಲ್ಲಿ ಸುಮಾರು 10 ಅಡಿ ಎತ್ತರದ ತಟ್ಟಿರಾಯನನ್ನು ನಿರ್ಮಿಸಲಾಗಿದೆ. ಕಬ್ಬಿಣದ ಪಟ್ಟಿಯ ಸುತ್ತಳತೆಯನ್ನು ಬಳಸಿಕೊಂಡು ಕೆಲಸ ನಿರ್ವಹಿಸಲಾಗಿದೆ. ಇತ್ತೀಚೆಗೆ ಕಣಿಪುರ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಈ ತಟ್ಟಿರಾಯನನ್ನು ಬಳಕೆ ಮಾಡಲಾಗಿದೆ.

Advertisement

6 ವರ್ಷದ ಹಿಂದೆ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ವಿಘ್ನೇಶ್‌ ವಿಶ್ವಕರ್ಮ ನೇತೃತ್ವದಲ್ಲಿ ಸುಮಾರು 20 ತಟ್ಟಿರಾಯ ನಿರ್ಮಾಣ ಮಾಡಿಕೊಡಲಾಗಿತ್ತು. ಇದಲ್ಲದೇ ಹಲವು ದೇವಸ್ಥಾನಗಳಿಗೂ ತಟ್ಟಿರಾಯ ನಿರ್ಮಾಣ ಮಾಡಿಕೊಟ್ಟಿದ್ದಾರೆ. 
ಪೋಳ್ಯ ಶ್ರೀ ವೆಂಕಟರಮಣ ಮಠ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ, ಅಡೂರು ದೇವಸ್ಥಾನಗಳು ಇದರಲ್ಲಿ ಪ್ರಮುಖವಾದವು.

Advertisement

Udayavani is now on Telegram. Click here to join our channel and stay updated with the latest news.

Next