Advertisement

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

09:55 AM Apr 29, 2024 | sudhir |

ದಾವಣಗೆರೆ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಟ್ಟ ಪ್ರಧಾನಿ, ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದ್ದಾರೆ.

Advertisement

ಮೋದಿಯವರು ಜನ್‌ಧನ್‌, ಮುದ್ರಾ ಯೋಜನೆ ಅನೇಕ ಯೋಜನೆ ನೀಡಿದ್ದಾರೆ. ಆರ್ಥಿಕವಾಗಿ 12ನೇ ಸ್ಥಾನದಲ್ಲಿದ್ದ ಭಾರತವನ್ನು ಮೂರನೇ ಸ್ಥಾನ ಕ್ಕೆ ತಂದಿದ್ದಾರೆ. ಮೊದಲ ಸ್ಥಾನಕ್ಕೆ ತರಲು ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಮೋದಿಯವರು ನಾರಿಶಕ್ತಿಗೆ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ನಾರಿ ಶಕ್ತಿ ವಿರೋಧಿಸುವಂತಹ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದರು.

ಸಿದ್ದೇಶ್ವರ ಅವರು ಸ್ಮಾರ್ಟ್‌ಸಿಟಿ ಯೋಜನೆ ಒಳಗೊಂಡಂತೆ ಹಲವಾರು ಯೋಜನೆ ಮೂಲಕ ದಾವಣಗೆರೆ ಅಭಿವೃದ್ಧಿ ಮಾಡಿದ್ದಾರೆ. ಮೋದಿಯವರು ಈಗ ಬರೀ ಟ್ರೈಲರ್‌ ತೋರಿಸಿದ್ದಾರೆ, ಫುಲ್‌ ಪಿಕ್ಚರ್‌ ನೋಡಲು ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯಾಗಿ ಮಾಡಬೇಕು. ಕಮಲಕ್ಕೆ ಮತ ನೀಡಿ ಗೆಲ್ಲಿಸಿ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು.

ನಾನು ಅಡುಗೆಮನೆಯಲ್ಲಿ ಕೆಲಸ ಮಾಡುವುದಕ್ಕೆ ಹಾಗೂ ಜನಸೇವೆ ಮಾಡಲೂ ಸೈ ಎಂದು ತಿಳಿಸಿದರು. ಸಂಸದರಾದ ಜಿ.ಎಂ. ಸಿದ್ದೇಶ್ವರ, ಸುಮಲತಾ, ಶಿವಕುಮಾರ್‌ ಉದಾಸಿ, ಶಾಸಕರಾದ ಬಿ.ಪಿ. ಹರೀಶ್‌, ಕೆ.ಎಸ್‌. ನವೀನ್‌, ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಎಸ್‌.ಎ. ರವೀಂದ್ರನಾಥ್‌, ಬಿ.ಸಿ. ಪಾಟೀಲ್‌, ಜಿ. ಕರುಣಾಕರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್‌.ವಿ. ರಾಮಚಂದ್ರ, ಎಂ. ಬಸವರಾಜ ನಾಯ್ಕ, ಎಚ್‌.ಎಸ್‌. ಶಿವಶಂಕರ್‌, ಅರುಣ್‌ಕುಮಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಮಹಾನಗರಪಾಲಿಕೆ ಉಪ ಮೇಯರ್‌ ಯಶೋದಾ ಎಗ್ಗಪ್ಪ, ಮಾಜಿ ಮೇಯರ್‌ ಬಿ.ಜಿ. ಅಜಯಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಎನ್‌. ರಾಜಶೇಖರ್‌, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲ್‌ ಕುಮಾರ್‌ ನಾಯ್ಕ, ಬಿ.ಎಸ್‌. ಜಗದೀಶ್‌, ಜಿ.ಎಸ್‌. ಅನಿತ್‌ ಕುಮಾರ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ಎಚ್‌. ಆನಂದಪ್ಪ, ಲೋಕಿಕೆರೆ ನಾಗರಾಜ್‌ ಇತರರು ಇದ್ದರು.

ಇದನ್ನೂ ಓದಿ: Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next