ಹೊಸದಿಲ್ಲಿ: ಭಾರತದ ಪ್ರಸಿದ್ಧ ಟಾಟಾ ಸಂಸ್ಥೆಯು ಸೌಂದರ್ಯವರ್ಧಕ ಉದ್ಯಮದತ್ತ ಮರಳು ವುದಾಗಿ ಹೇಳಿಕೊಂಡಿದೆ. 23 ವರ್ಷಗಳ ಹಿಂದೆ ಈ ಕ್ಷೇತ್ರದಿಂದ ದೂರವಾಗಿದ್ದ ಸಂಸ್ಥೆ, ಇಲ್ಲಿರುವ ಲಾಭಾಂಶವನ್ನು ಅರಿತುಕೊಂಡು ಇದೀಗ ವಾಪಸು ಬರುವುದಾಗಿ ತಿಳಿಸಿದೆ.
ಟಾಟಾದ ಅಂಗಸಂಸ್ಥೆ, ಟ್ರೆಂಟ್‌ನ ಮುಖ್ಯಸ್ಥ ರಾಗಿರುವ ನೋಯೆಲ್ ಟಾಟಾ ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
“ಸದ್ಯಕ್ಕೆ ನಾವು ಸೌಂದರ್ಯವರ್ಧಕ, ಪಾದರಕ್ಷೆಗಳು ಮತ್ತು ಒಳಉಡುಪಿನ ವ್ಯಾಪಾರದತ್ತ ಗಮನ ಹರಿಸುತ್ತಿದ್ದೇವೆ. ಇದು ಹೆಚ್ಚು ಅಭಿವೃದ್ಧಿ ಹೊಂದು ತ್ತಿರುವ ಕ್ಷೇತ್ರವಾದ್ದರಿಂದ, ವಿವಿಧ ರೀತಿ ಮತ್ತು ಸ್ವರೂಪದ ಉತ್ಪನ್ನಗಳಿಗೆ ಒತ್ತು ನೀಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಯ್ತು; ಯತ್ನಾಳ್ ಕಿಡಿ
2017ರಲ್ಲಿ 11 ಬಿಲಿಯನ್ ಡಾಲರ್(84 ಸಾವಿರ ಕೋಟಿರೂ.)ಗೆ ಸೀಮಿತವಾಗಿದ್ದ ಸೌಂದರ್ಯವರ್ಧಕ ಮಾರುಕಟ್ಟೆ 2025ರ ವೇಳೆಗೆ ದುಪ್ಪಟ್ಟಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಲಾಕ್ಮೆ ಸಂಸ್ಥೆಯನ್ನು ಭಾರತಕ್ಕೆ ಪರಿಚಯಿಸಿದ ಖ್ಯಾತಿ ಪಡೆದಿರುವ ಟಾಟಾ ಸಂಸ್ಥೆಯು 2013ರಲ್ಲಿ ಈ ಕ್ಷೇತ್ರದಿಂದ ಹೊರನಡೆದಿತ್ತು.