ಪುಣೆ: ನೆದರ್ಲೆಂಡ್ಸ್‌ನ ತಾಲೂನ್ ಗ್ರೀಕ್‌ಸ್ಪೂರ್ ಅವರು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಫ್ರಾನ್ಸ್‌ನ ಬೆಂಜಮಿನ್ ಅವರನ್ನು ಉರುಳಿಸಿ ಟಾಟಾ ಓಪನ್ ಮಹಾರಾಷ್ಟ್ರ ಕೂಟದ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರ ಚೊಚ್ಚಲ ಎಟಿಪಿ ವಿಶ್ವ ಟೂರ್ ಪ್ರಶಸ್ತಿಯಾಗಿದೆ.
ಎರಡು ತಾಸು ಮತ್ತು 16 ನಿಮಿಷಗಳ ಫೈನಲ್ ಹೋರಾಟದಲ್ಲಿ ಗ್ರೀಕ್‌ಸ್ಪೂರ್ ಅವರು 4-6, 7-5, 6-3 ಸೆಟ್‌ಗಳಿಂದ ಬೋನಿj ಅವರನ್ನು ಸೋಲಿಸಲು ಯಶಸ್ವಿಯಾದರು.
ಜೀವನ್-ಬಾಲಾಜಿ ರನ್ನರ್ ಅಪ್
ಇದೇ ಕೂಟದ ಡಬಲ್ಸ್‌ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ ಮತ್ತು ಜೀವನ್ ನೆದುಂಚೆಜಿಯಾನ್ ಅವರು ಫೈನಲ್‌ನಲ್ಲಿ ಬೆಲ್ಜಿಯಂನ ಸ್ಯಾಂಡರ್ ಗೈಲ್ ಮತ್ತು ಜೋರನ್ ಅವರೆದುರು 4-6, 4-6 ಸೆಟ್‌ಗಳಿಂದ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡರು. ಎಟಿಪಿ ಟೂರ್ ಫೈನಲ್‌ನಲ್ಲಿ ಮೊದಲ ಬಾರಿ ಆಡಿದ ಬಾಲಾಜಿ ನಿರೀಕ್ಷಿತ ನಿರ್ವಹಣೆ ನೀಡಲು ಅಸಮರ್ಥರಾದರು.