Advertisement

Polls: ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿದೇಶಿ ವಿಸ್ಕಿ, ಬಿಯರ್‌ ನೀಡುತ್ತೇನೆ; ಅಭ್ಯರ್ಥಿ

09:10 AM Apr 01, 2024 | Team Udayavani |

ಮಹಾರಾಷ್ಟ್ರ: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ತನ್ನ ಕ್ಷೇತ್ರದ ಮತದಾರರಿಗೆ ನಾನಾ ಆಶ್ವಾಸನೆಗಳನ್ನು ನೀಡುತ್ತಾರೆ. ಅಭಿವೃದ್ಧಿಯ ಮಾತು, ಅನುದಾನ.. ಹೀಗೆ ಅನೇಕ ಭರವಸೆಗಳನ್ನು ನೀಡಿ ಮತವನ್ನು ಪಡೆಯಲು ಅಭ್ಯರ್ಥಿಗಳು ಕಸರತ್ತು ನಡೆಸುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬರು ಸ್ವತಂತ್ರ ಅಭ್ಯರ್ಥಿ ಮತದಾರರನ್ನು ಸೆಳೆಯಲು ವಿಭಿನ್ನ ರೀತಿಯ ಆಶ್ವಾಸನೆಯನ್ನು ನೀಡಿದ್ದಾರೆ.

Advertisement

ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಚಿಮುರ್ ಗ್ರಾಮದ ಸ್ವತಂತ್ರ ಅಭ್ಯರ್ಥಿ ವನಿತಾ ರಾವುತ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಸಬ್ಸಿಡಿ ದರದಲ್ಲಿ ವಿಸ್ಕಿ ಮತ್ತು ಬಿಯರ್ ನೀಡುವುದಾಗಿ ಚುನಾವಣಾ ಭರವಸೆ ನೀಡಿದ್ದಾರೆ.

ಅಖಿಲ ಭಾರತಿ ಮಾನವತಾ ಪಕ್ಷದ ಅಭ್ಯರ್ಥಿ ವನಿತಾ ರಾವುತ್ ಅವರು ತಮ್ಮ “ಬಡ ಮತದಾರರಿಗೆ” ಈ ಚುನಾವಣಾ ಭರವಸೆಯನ್ನು ನೀಡುವುದಾಗಿ ಹೇಳಿದ್ದಾರೆ.

ವನಿತಾ ರಾವುತ್ ಅವರು ತಾವು ಚುನಾವಣೆಯಲ್ಲಿ ಗೆದ್ದರೆ, ಪ್ರತಿ ಹಳ್ಳಿಯಲ್ಲಿ ಬಿಯರ್ ಬಾರ್‌ಗಳನ್ನು ತೆರೆಯುವುದು ಮಾತ್ರವಲ್ಲದೆ ಸಂಸದರ ನಿಧಿಯಿಂದ ಬಡವರಿಗೆ ಆಮದು ಮಾಡಿಕೊಂಡು ವಿಸ್ಕಿ ಮತ್ತು ಬಿಯರ್ ನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.

ಪಡಿತರ ವ್ಯವಸ್ಥೆಯ ಮೂಲಕ ಮದ್ಯವನ್ನು ಆಮದು ಮಾಡಿಕೊಡುತ್ತೇನೆ. ತೀರಾ ಬಡವರು ಕಷ್ಟಪಟ್ಟು ದುಡಿಯುತ್ತಾರೆ ಮತ್ತು ಮದ್ಯವನ್ನು ಕುಡಿಯುವುದರಲ್ಲಿ ಮಾತ್ರ ಸಮಾಧಾನವನ್ನು ಕಂಡುಕೊಳ್ಳುತ್ತಾರೆ. ಆದರೆ ಅವರು ಗುಣಮಟ್ಟದ ವಿಸ್ಕಿ ಅಥವಾ ಬಿಯರ್ ಖರೀದಿಸಲು ಸಾಧ್ಯವಿಲ್ಲ. ಅವರು ಹಳ್ಳಿಗಾಡಿನ ಮದ್ಯವನ್ನು ಮಾತ್ರ ಕುಡಿಯುತ್ತಾರೆ ಮತ್ತು ಅವರು ಸೇವಿಸುವ ಪ್ರಮಾಣಕ್ಕೆ ಯಾವುದೇ ಮಿತಿಯಿಲ್ಲ. ಆದ್ದರಿಂದ, ಅವರು ಆಮದು ಮಾಡಿದ ಮದ್ಯವನ್ನು ಅನುಭವಿಸಲು ಮತ್ತು ಆನಂದಿಸಲು ನಾನು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

Advertisement

ಜನರು ಮದ್ಯವನ್ನು ಖರೀದಿಸಲು ಮತ್ತು ಮಾರಾಟ ಮಾಡುವವರು ಪರವಾನಗಿ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.

ವನಿತಾ ರಾವುತ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. 2019 ರ ಲೋಕಸಭಾ ಚುನಾವಣೆಯಲ್ಲಿ, ಅವರು ನಾಗ್ಪುರದಿಂದ ಸ್ಪರ್ಧಿಸಿದರೆ, 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರು ಚಿಮೂರ್ ಅಸೆಂಬ್ಲಿ ಸ್ಥಾನದಿಂದ ಕಣಕ್ಕಿಳಿದಿದ್ದರು.

2019 ರಲ್ಲೂ ಅವರು ಇದೇ ಚುನಾವಣಾ ಭರವಸೆಯನ್ನು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next