Advertisement

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

01:11 AM Apr 26, 2024 | Team Udayavani |

ಹೊಸದಿಲ್ಲಿ: ಎಂಜಿನಿಯರಿಂಗ್‌ ಪ್ರವೇಶಕ್ಕಾಗಿ ನಡೆಯುವ 2024ರ ಜೆಇಇ-ಮೇನ್‌ ಪರೀಕ್ಷೆಯ ಫ‌ಲಿತಾಂಶವನ್ನು ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ (ಎನ್‌ಟಿಎ) ಪ್ರಕಟಿಸಿದೆ. ಒಟ್ಟು 56 ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ. ಈ ಪೈಕಿ ಮಹಾರಾಷ್ಟ್ರದ ಗ್ರಾಮವೊಂದರ ರೈತರೊಬ್ಬರ ಮಗ ಕೂಡ ಸೇರಿದ್ದಾರೆ.

Advertisement

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬೆಲ್ಖೇಡ್‌ ಗ್ರಾಮದ ನೀಲ್‌ಕೃಷ್ಣ ಗಜರೆ ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದು, ಒಬಿಸಿ-ಎನ್‌ಸಿಎಲ್‌ ಕ್ಯಾಟಗರಿಯಲ್ಲಿ ಟಾಪರ್‌ ಆಗಿದ್ದಾರೆ.

“10ನೇ ತರಗತಿ ಮುಗಿಯುತ್ತಿರುವಂತೆಯೇ ಜೆಇಇ ಮೇನ್‌ ಪರೀಕ್ಷೆಗೆ ತಯಾರಿ ಆರಂಭಿಸಿದೆ. ದಿನಕ್ಕೆ 10-15 ತಾಸುಗಳು ಅಧ್ಯಯನ ನಡೆಸಿದೆ. 11 ಮತ್ತು 12ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಕೋಚಿಂಗ್‌ಗೆ ಪ್ರಸಿದ್ಧ ತಾಣವಾಗಿರುವ ರಾಜಸ್ಥಾನದ ಕೋಟಾದ ಕಾಲೇಜಿಗೆ ಸೇರ್ಪಡೆಯಾದೆ. ಐಐಟಿಯಲ್ಲಿ ಅಧ್ಯಯನ ಮಾಡಬೇಕೆಂಬ ಇಚ್ಛೆಯಿಂದ ಕೋಟದಲ್ಲಿಯೇ ಕೋಚಿಂಗ್‌ ತೆಗೆದುಕೊಂಡೆ’ ಎಂದು ನೀಲ್‌ಕೃಷ್ಣ ಗಜರೆ ತಿಳಿಸಿದ್ದಾರೆ. “ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗೆ ಸೇರಬೇಕೆಂಬ ಇಚ್ಛೆ ಇದೆ’ ಎಂದು ಅವರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next