Advertisement

Champions; ಬೋಪಣ್ಣ-ಎಬ್ಡೆನ್‌ಗೆ ಮಿಯಾಮಿ ಓಪನ್‌ ಪ್ರಶಸ್ತಿ

10:23 PM Mar 31, 2024 | Team Udayavani |

ಮಿಯಾಮಿ (ಅಮೆರಿಕ): ಭಾರತದ ಖ್ಯಾತ ಆಟಗಾರ ರೋಹನ್‌ ಬೋಪಣ್ಣ ಮತ್ತು ಆವರ ಆಸ್ಟ್ರೇಲಿಯ ಜತೆಗಾರ ಮ್ಯಾಟ್‌ ಎಬ್ಡೆನ್‌ ಅವರು ಮಿಯಾಮಿ ಓಪನ್‌ ಟೆನಿಸ್‌ ಕೂಟದ ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಅವರು ವಿಶ್ವದ ನಂಬರ್‌ ವನ್‌ ಸ್ಥಾನಕ್ಕೆ ಮರಳಿದ ಸಾಧನೆ ಮಾಡಿದ್ದಾರೆ.

Advertisement

ಈ ವರ್ಷ ತಮ್ಮ ಶ್ರೇಷ್ಠ ನಿರ್ವಹಣೆ ಯನ್ನು ಮುಂದುವರಿಸಿದ 44ರ ಹರೆಯದ ಬೋಪಣ್ಣ ಮತ್ತು ಎಬ್ಡೆನ್‌ ಅವರು ಕ್ರೊವೇಶಿಯದ ಐವಾನ್‌ ಡೊಡಿಗ್‌ ಮತ್ತು ಅಮೆರಿಕದ ಆಸ್ಟಿನ್‌ ಕ್ರ್ಯಾಯಿಸೆಕ್‌ ಅವರನ್ನು 6-7 (3), 6-3, 10-6 ಸೆಟ್‌ಗಳಿಂದ ಉರುಳಿಸಿ ಪ್ರಶಸ್ತಿ ಗೆದ್ದರು.

ಈ ಗೆಲುವಿನಿಂದ ಬೋಪಣ್ಣ ಅವರು ಎಟಿಪಿ ಮಾಸ್ಟರ್ 1000 ಕೂಟದ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರರೆಂಬ ದಾಖಲೆಯನ್ನು ಮತ್ತೆ ತನ್ನ ಹೆಸರಿಗೆ ಬರೆಸಿಕೊಂಡರು. ಅವರು ತನ್ನ 43ರ ಹರೆಯದಲ್ಲಿ ಕಳೆದ ವರ್ಷ ಇಂಡಿಯನ್‌ ವೆಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮಾಸ್ಟರ್ 1000 ಪ್ರಶಸ್ತಿ ಗೆದ್ದ ಹಿರಿಯ ಆಟಗಾರರೆಂಬ ದಾಖಲೆ ಮಾಡಿದ್ದರು. ಈ ಸಾಧನೆಯಿಂದ ಅವರು ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.

ಇದೊಂದು ಅದ್ಭುತ ನಿರ್ವಹಣೆ. ಇಂತಹ ಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡಲು ನಾವು ಪ್ರಯತ್ನಿಸುತ್ತೇವೆ ಮತ್ತು ಅದಕ್ಕಾಗಿ ಆಡುತ್ತಿದ್ದೇವೆ ಎಂದು ತಿಳಿಸಿದ ಬೋಪಣ್ಣ ಅವವರು ಮಾಸ್ಟರ್ 1000 ಮತ್ತು ಗ್ರ್ಯಾನ್‌ಸ್ಲಾಮ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದೇ ನಮ್ಮ ಬಯಕೆ. ದಾಖಲೆತಯನ್ನು ಮುಂದುವರಿಸಿಕೊಂಡು ಹೋಗುವುದು ಉತ್ತಮ ಎಂದರು. ಬೋಪಣ್ಣ ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಡಬಲ್ಸ್‌ನಲ್ಲಿ ತನ್ನ ಬಾಳ್ವೆಯ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next