Advertisement
ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ ಲಕ್ಷ್ಯ ಸೇನ್ 21-15, 21-10 ನೇರ ಗೇಮ್‌ಗಳಿಂದ ಗೆಲುವು ದಾಖಲಿಸಿದರು. ಪಂದ್ಯದುದ್ದಕ್ಕೂ ವಿತಿಸರ್ನ್ ತಪ್ಪು ಹೊಡೆತಗಳಿಂದ ಅಂಕಗಳ ಬರಗಾಲ ಅನುಭವಿಸಿದರು. ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಎಂ.ಆರ್. ಅರ್ಜುನ್- ಸುಮೀತ್ ಬಿ. ರೆಡ್ಡಿ ಜೋಡಿ 21-10, 21-16 ಗೇಮ್‌ಗಳಿಂದ ಮಲೇಶ್ಯದ ಗೊ ಝೆ ಫೆಯಿ-ನೂರ್ ಇಜಾಜುದ್ದೀನ್ ಜೋಡಿಯನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ವನಿತಾ ಸಿಂಗಲ್ಸ್‌ನ ಫೈನಲ್‌ನಲ್ಲಿ ಅಶ್ಮಿತಾ ಚಲಿಹ ಭಾರತದವರೇ ಆದ ವೃಶಾಲಿ ಗುಮ್ಮಡಿ ಅವರನ್ನು 21-16, 21-13 ನೇರ ಗೇಮ್‌ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು. ವೃಶಾಲಿ ವಿರುದ್ಧ ಸತತವಾಗಿ ಸೋಲುಂಡಿದ್ದ ಅಶ್ಮಿತಾ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷಾಲಿ ವಿರುದ್ಧ ಗೆಲುವು ದಾಖಲಿಸಿದರು. ವನಿತಾ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಮೇಘನಾ ಜಕ್ಕಂಪುಡಿ- ಪೂರ್ವಿಶಾ ಎಸ್. ರಾಮ್ ಜೋಡಿ ಹಾಂಕಾಂಗ್‌ನ ವಿಂಗ್ ಯಾಂಗ್-ಯೆಂಗ್ ಗಾ ಟಿಂಗ್ ವಿರುದ್ಧ 10-21, 11-21 ಗೇಮ್‌ಗಳಿಂದ ಮುಗ್ಗರಿಸಿತು.