Advertisement

ಜ.10ಕ್ಕೆ ಫೋರ್ಡ್‌ ಇಂಡಿಯಾ ಉತ್ಪಾದನಾ ಘಟಕದ ಸ್ವಾಧೀನ ಪ್ರಕ್ರಿಯೆ ಪೂರ್ಣ

08:03 PM Dec 30, 2022 | Team Udayavani |

ನವದೆಹಲಿ:  ಗುಜರಾತ್‌ನ ಸನಂದ್‌ದಲ್ಲಿರುವ ಫೋರ್ಡ್‌ ಇಂಡಿಯಾದ ಉತ್ಪಾದನಾ ಘಟಕವನ್ನು ತನ್ನ ಅಂಗ ಸಂಸ್ಥೆ ಟಾಟಾ ಪ್ಯಾಸೆಂಜರ್‌ ಎಲೆಕ್ಟ್ರಿಕ್‌ ಮೊಬಿಲಿಟಿ ಲಿ.(ಟಿಪಿಇಎಂಎಲ್‌) ಮೂಲಕ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ 2023ರ ಜ.10ರಂದು ಪೂರ್ಣಗೊಳ್ಳಲಿದೆ ಎಂದು ಟಾಟಾ ಮೋಟರ್ಸ್‌ ತಿಳಿಸಿದೆ.

Advertisement

ಈ ವರ್ಷದ ಆಗಸ್ಟ್‌ನಲ್ಲಿ 725.7 ಕೋಟಿ ರೂ.ಗಳಿಗೆ ಫೋರ್ಡ್‌ ಇಂಡಿಯಾ ಪ್ರೈ. ಲಿ.(ಎಫ್ಐಪಿಎಲ್‌)ನ ಗುಜರಾತ್‌ನ ಸನಂದ್‌ ಉತ್ಪಾದನಾ ಘಟಕವನ್ನು ಟಿಪಿಇಎಂಎಲ್‌ ಖರೀದಿಸಿತ್ತು. ಸ್ವಾಧೀನವು ಸಂಪೂರ್ಣ ಭೂಮಿ ಮತ್ತು ಕಟ್ಟಡ ಹಾಗೂ ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಒಳಗೊಂಡಿದೆ. ಇದೇ ವೇಳೆ ಎಫ್ಐಪಿಎಲ್‌ ನ ಎಲ್ಲಾ ಅರ್ಹ ಉದ್ಯೋಗಿಗಳು ಟಿಪಿಇಎಂಎಲ್‌ ಗೆ ವರ್ಗಾವಣೆಯಾಗಲಿದ್ದಾರೆ ಎಂದು ಟಾಟಾ ಮೋಟರ್ಸ್‌ ತಿಳಿಸಿದೆ.

ಇದನ್ನೂ ಓದಿ: ಕಮಲಾಕ್ಷಿ ಸಹಕಾರ ಸಂಘದಲ್ಲಿ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್‌ ಖಾತೆ ಸ್ಥಗಿತಕ್ಕೆ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next