Advertisement

1000 ಉದ್ಯೋಗ ಕಡಿತಕ್ಕೆ ಮುಂದಾದ ಟಾಟಾ ಮೋಟಾರ್ಸ್‌ ಒಡೆತನದ JLR ಸಂಸ್ಥೆ

04:53 PM Jun 16, 2020 | sudhir |

ಲಂಡನ್‌: ಲಾಕ್‌ಡೌನ್‌ನಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಕಂಪನಿಗಳು ಸಮಸ್ಯೆ ಪರಿಹಾರಕ್ಕಾಗಿ ಉದ್ಯೋಗ ಕಡಿತದ ಮಾರ್ಗ ಆಯ್ದುಕೊಂಡಿದ್ದು, ಈಗಾಗಲೇ ವಿಶ್ವದ್ಯಾಂತ ಲಕ್ಷಂತಾರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದೀಗ ಟಾಟಾ ಮೋಟಾರ್ಸ್‌ ಒಡೆತನದ ಜಾಗ್ವಾರ್‌ಲ್ಯಾಂಡ್‌ ರೋವರ್‌(JLR‌), ಕೋವಿಡ್‌ ತಂದಿಟ್ಟಿರುವ ಬಿಕ್ಕಟ್ಟಿನ ಸನ್ನಿವೇಶದಿಂದಾಗಿ ಸುಮಾರು 1,000 ಗುತ್ತಿಗೆ ಆಧಾರದ ಏಜೆನ್ಸಿ ಉದ್ಯೋಗಗಳನ್ನು ಕಡಿತಗೊಳಿಸಲು ಯೋಜನೆ ರೂಪಿಸಿದೆ.

Advertisement

ಹೌದು ಲಾಕ್‌ಡೌನ್ ಜಾರಿಯಾದಗಿನಿಂದ ಮಾರಾಟ ಪ್ರಮಾಣದಲ್ಲಿ ಶೇ.30.9ರಷ್ಟು ಕುಸಿತ ಕಂಡುಬಂದಿದ್ದು, ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಈ ನಿಟ್ಟಿನಲ್ಲಿ ಬ್ರಿಟನ್‌ನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಜೆಎಲ್‌ಆರ್‌ ಮುಂಬರುವ ತಿಂಗಳುಗಳಲ್ಲಿ ಕಂಪನಿಯು ತನ್ನ ಉತ್ಪಾದನಾ ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ (ಏಜೆನ್ಸಿ) ನೌಕರರ ಪ್ರಮಾಣವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಕಂಪನಿ ಮೂಲಗಳು ತಿಳಿಸಿದೆ.

ಇನ್ನು ಈ ಕುರಿತು ಸಂಸ್ಥೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದು, ಕಾರ್ಯದಕ್ಷತೆ ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಸುಸ್ಥಿರ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಮತ್ತು ವ್ಯವಹಾರದ ದೀರ್ಘ‌ಕಾಲಿಕ ಯಶಸ್ಸು ಕಾಪಾಡುವ ಮೂಲಕ ಕಾರ್ಯದಕ್ಷತೆಯನ್ನು ಮತ್ತಷ್ಟು ಸಾಧಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ. ಬ್ರಿಟನ್ ‌​ನಲ್ಲಿರುವ ಎಲ್ಲ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಕಡಿತಗೊಳಿಸುವ ಸಾಧ್ಯತೆ ಇದ್ದು, ಈ ಪ್ರಕ್ರಿಯೆಯು ಜುಲೈ ಕೊನೆಯಲ್ಲಿ ಪ್ರಾರಂಭವಾಗಿ ವರ್ಷದುದ್ದಕ್ಕೂ ಇರಲಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next