Advertisement

ಟಾಟಾದಿಂದ 80 ಸಾವಿರ ವಿದ್ಯುತ್‌ ಚಾಲಿತ ವಾಹನ

08:32 PM Apr 29, 2022 | Team Udayavani |

ನವದೆಹಲಿ/ಮುಂಬೈ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ಟಾಟಾ ಮೋಟರ್ಸ್‌ 80 ಸಾವಿರಕ್ಕಿಂತ ಹೆಚ್ಚು ವಿದ್ಯುತ್‌ ಚಾಲಿತ ವಾಹನಗಳನ್ನು ಉತ್ಪಾದಿಸುವ ಗುರಿ ಹಾಕಿಕೊಂಡಿದೆ.

Advertisement

ಹೀಗೆಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು “ರಾಯಿಟರ್ಸ್‌’ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಎಷ್ಟು ಪ್ರಮಾಣದಲ್ಲಿ ವಾಹನಗಳನ್ನು ಉತ್ಪಾದಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.

ದೇಶದಲ್ಲಿ ವಿದ್ಯುತ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂಬ ಅಂಶವನ್ನು ಒಪ್ಪಿಕೊಂಡಿದ್ದಾರೆ.

2021-22ನೇ ಸಾಲಿನಲ್ಲಿ ಕಂಪನಿ 19 ಸಾವಿರ ವಿದ್ಯುತ್‌ ವಾಹನಗಳನ್ನು ಉತ್ಪಾದಿಸಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:‘ವಾಮನ’ ಕನ್ನಡ ಸಿನಿಮಾದ ನಾಯಕಿಯಾಗಿ ಪುತ್ತೂರಿನ ರಚನಾ ರೈ

Advertisement

ದೇಶದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ವಾಹನಗಳ ಪೈಕಿ ಶೇ.90 ಪಾಲು ಟಾಟಾ ಮೋಟರ್ಸ್‌ನದ್ದೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next