Advertisement

ಹೊಸ ಫೀಚರ್‌ ಜತೆಗೆ ಟಾಟಾ ಅಲ್ಟೋಸ್‌ ಐ ಟರ್ಬೋ

04:02 PM Jan 19, 2021 | Team Udayavani |

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಟಾಟಾ ಕಂಪನಿಯ ಅಲ್ಟೋಸ್‌ ಕಾರು ಈಗಷ್ಟೇ ವರ್ಷದ ಸಂಭ್ರಮ ಮುಗಿಸುತ್ತಿದೆ. ಇದರ ಬೆನ್ನಲ್ಲೇ ಟಾಟಾ ಅಲ್ಟೋಸ್ ನಲ್ಲೇ ಐ ಟರ್ಬೋ ಎಂಬ ಪೆಟ್ರೋಲ್‌ ಎಂಜಿನ್‌ನ ಹೊಸ ಆವೃತ್ತಿಯನ್ನು ಇತ್ತೀಚೆಗಷ್ಟೇ ಅನಾವರಣ ಮಾಡಲಾಗಿದೆ. ಸದ್ಯ ಕಾರಿನ ಮಾದರಿಯಷ್ಟೇ ಅನಾವರಣ ಗೊಂಡಿದ್ದು, ಜ.22ರಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಜ.14ರಿಂದಲೇ ಈ ಕಾರಿನ ಬುಕಿಂಗ್‌ ಆರಂಭ ವಾಗಿದ್ದು, ಮೂರು ವೇರಿಯಂಟ್‌ ಗಳಲ್ಲಿ ಇದು ಸಿಗುತ್ತಿದೆ.

Advertisement

ಅಂದರೆ, ಎಕ್ಸ್ ಟಿ, ಎಕ್ಸ್ ಝಡ್‌ ಮತ್ತು ಎಕ್ಸ್ ಝಡ್‌ +. ತಾಂತ್ರಿಕವಾಗಿ ಹೇಳುವುದಾದರೆ, ಇದು 1.2 ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಮೂರು ಸಿಲಿಂಡರ್‌ಗಳಿದ್ದು, 5.500 ಆರ್‌ಪಿಎಂನಲ್ಲಿ 107ಬಿಎಚ್‌ ಪಿ ಪವರ್‌ ಹೊಂದಿದೆ. ಇದರಲ್ಲಿ ಐದು ಗೇರ್‌ಗಳನ್ನು ಹೊಂದಿದ್ದು, ಸಿಟಿ ಮತ್ತು ನ್ಪೋರ್ಟ್‌ ಮೋಡ್‌ ಅನ್ನೂ ಒಳಗೊಂಡಿದೆ. ಮೈಲೇಜ್‌ ಬೇಕೆನ್ನುವವರು, ಸಿಟಿ ಮೋಡ್‌ನ‌ಲ್ಲೂ ಒಂದಷ್ಟು ಅಗ್ರೆಸ್ಸಿವ್‌ ಮೈಂಡ್‌ ಸೆಟ್‌ ಇರುವಂಥವರಿಗೆ ನ್ಪೋರ್ಟ್‌ ಮೋಡ್‌ ಕೊಡಲಾಗಿದೆ.

ಇದನ್ನೂ ಓದಿ:ವೀರೋಚಿತ ಸರಣಿ ಗೆಲುವಿನ ಹಿಂದಿದೆ ನೋವು ಅವಮಾನ..! ಈ ಸರಣಿಯಲ್ಲಿ ಭಾರತ ಗಳಿಸಿದ್ದೇನು?

ಕಂಪನಿಯ ಪ್ರಕಾರ, ಇದು ಪ್ರತಿ ಲೀ. ಪೆಟ್ರೋಲ್‌ಗೆ 18.13 ಕಿ.ಮೀ. ಮೈಲೇಜ್‌ ನೀಡಲಿದೆ. ಅಂದಹಾಗೆ, ಈ ಹೊಸ ಮಾದರಿಯ ಜತೆಗೆ, ಅಲ್ಟೋಸ್ ‌ನಲ್ಲಿ 1.2 ಲೀ. ರಿವೋಲ್ಟನ್‌ ಪೆಟ್ರೋಲ್‌ ಮತ್ತು 1.5 ಲೀ. ಟಬೋìಚಾರ್ಜಡ್‌ ರಿವೋಟೋರ್ಕ್‌ ಡೀಸೆಲ್‌ ಎಂಜಿನ್‌ ಆಪ್ಷನ್‌ ಕೂಡ ಸಿಗಲಿದೆ.

ಇದನ್ನೂ ಓದಿ:ಮಗುಚಿ ಬಿದ್ದ ಬಿಯರ್ ಬಾಟಲಿ ತುಂಬಿದ್ದ ಲಾರಿ! ಬಿಯರ್ ಗೆ ಮುಗಿಬಿದ್ದ ಜನತೆ

Advertisement

ಹಲವು ಅನುಕೂಲಗಳಿವೆ…
2021ರ ಮಾದರಿಯಲ್ಲಿ ಕೆಲವೊಂದು ಹೊಸ ಫೀಚರ್‌ಗಳನ್ನೂ ಅಳವಡಿಸಿಕೊಳ್ಳಲಾಗಿದೆ.ಐಆರ್‌ ಎ ತಂತ್ರಜ್ಞಾನದ ಅಡಿಯಲ್ಲಿ 27 ಫೀಚರ್‌ಗಳನ್ನು ನೀಡಲಾಗುತ್ತಿದೆ. ರಿಮೋಟ್‌ ಕಮಾಂಡ್ , ವೆಹಿಕಲ್‌ ಸೆಕ್ಯುರಿಟಿ, ಲೋಕೇಶನ್‌ ಆಧರಿತ ಸೇವೆಗಳು, ಗೇಮಿಫಿಕೇಶನ್‌ ಮತ್ತು ಲೈವ್‌ ವೆಹಿಕಲ್‌ ಡಯಾಗ್ನಿಸಿಸ್‌ ಅನ್ನೂ ನೀಡಲಾಗಿದೆ. ಇದು ಹಿಂದಿ, ಇಂಗ್ಲಿಷ್‌ನಲ್ಲಿ ಕಮಾಂಡ್‌ಗಳನ್ನು ಸ್ವೀಕರಿಸಲಿದೆ. ಜತೆಗೆ, ವಾಟ್‌ 3 ವರ್ಡ್ಸ್ ತಂತ್ರಜ್ಞಾನವನ್ನೂ ನೀಡಲಿದೆ. ಇದರಿಂದ
ಲೊಕೇಶನ್‌ ಹುಡುಕುವ ಶ್ರಮ ಕಡಿಮೆಯಾಗಲಿದೆ.

*ಸೋಮಶೇಖರ ಸಿ.ಜೆ

Advertisement

Udayavani is now on Telegram. Click here to join our channel and stay updated with the latest news.

Next