Advertisement

ಟಾಟಾಗೆ ಹುದ್ದೆ ತೊರೆಯಲು ಹೇಳಿದ್ದ ಇಂದಿರಾ!

10:14 PM Oct 09, 2021 | Team Udayavani |

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿದ್ದ ಏರ್‌ ಇಂಡಿಯಾ, ಟಾಟಾ ಸಂಸ್ಥೆಯ ಪಾಲಾಗಿದೆ. ಆದರೆ, 43 ವರ್ಷಗಳ ಹಿಂದೆ, ಇದೇ ಟಾಟಾ ಸಂಸ್ಥೆಯ ತೆಕ್ಕೆಯಲ್ಲಿದ್ದ ಏರ್‌ ಇಂಡಿಯಾ, ಕೇಂದ್ರ ಸರ್ಕಾರದ ತೆಕ್ಕೆಗೆ ಜಾರಿತ್ತು. ಆಗ, ಕೇಂದ್ರದಲ್ಲಿ ಆಡಳಿತದಲ್ಲಿದ್ದ ಮೊರಾರ್ಜಿ ದೇಸಾಯಿ ಅವರ ಸರ್ಕಾರ, ಟಾಟಾ ಸಮೂಹದಲ್ಲಿದ್ದ ಏರ್‌ ಇಂಡಿಯಾ ಹಾಗೂ ಇಂಡಿಯನ್‌ ಏರ್‌ಲೈನ್ಸ್‌ ಸಂಸ್ಥೆಗಳಿಗೆ ಮುಖ್ಯಸ್ಥರಾಗಿದ್ದ ಜೆಆರ್‌ಡಿ ಟಾಟಾ ಅವರಿಗೆ ಏರ್‌ ಇಂಡಿಯಾ ಹಾಗೂ ಇಂಡಿಯನ್‌ ಏರ್‌ಲೈನ್ಸ್‌ ಮುಖಸ್ಥರ ಹುದ್ದೆ ತೊರೆಯುವಂತೆ ಸೂಚಿಸಿತ್ತು.

Advertisement

ಹುದ್ದೆಯಿಂದ ನಿರ್ಗಮಿಸುವಂತೆ ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿಯವರೇ ಜೆಆರ್‌ಡಿ ಟಾಟಾ ಅವರಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಈಗ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ.

ಪತ್ರದಲ್ಲೇನಿದೆ?
ಪತ್ರದಲ್ಲಿ ಜೆಆರ್‌ಡಿ ಟಾಟಾ ಅವರು ಏರ್‌ ಇಂಡಿಯಾ ಹಾಗೂ ಇಂಡಿಯನ್‌ ಏರ್‌ಲೈನ್ಸ್‌ ಸಂಸ್ಥೆಗಳನ್ನು ಕಟ್ಟಲು ಪಟ್ಟ ಶ್ರಮವನ್ನು ಶ್ಲಾಘಿಸಿರುವ ಇಂದಿರಾ ಗಾಂಧಿ, “ನಿಮ್ಮನ್ನು ಈ ಎರಡೂ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ಮುಂದುವರಿಸಲು ಕೆಲವಾರು ಆಡಳಿತಾತ್ಮಕ ಒತ್ತಡಗಳು ಬಿಡುತ್ತಿಲ್ಲ. ಅಂಥ ಒತ್ತಡದ ನಡುವೆ ನಾನೂ ಕಾರ್ಯ ನಿರ್ವಹಿಸಬೇಕಿದೆ. ಹಾಗಾಗಿ, ಈ ಎರಡೂ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಯಲ್ಲಿ ನೀವಿನ್ನು ಮುಂದುವರಿಯಲಾರಿರಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿದೇಶ ಪ್ರವಾಸ,ಅಲ್ಲೇ ಸೆಟ್ಲ್ ಆಗ್ತೀರಾ? : 24 ಲಕ್ಷದವರೆಗೆ ಆರ್ಥಿಕ ಪ್ರೋತ್ಸಾಹವೂ ಇದೆ!

ಟಾಟಾ ಉತ್ತರ
ಇದಕ್ಕೆ ಪ್ರತ್ಯುತ್ತರ ನೀಡಿರುವ ಟಾಟಾ, “ಈ ಸಂಸ್ಥೆಗಳನ್ನು ಕಟ್ಟಲು ನಾನು ಪಟ್ಟ ಶ್ರಮವನ್ನು ನೀವು ಗುರುತಿಸಿರುವುದಕ್ಕೆ ನಾನು ಆಭಾರಿ. ಈ ಸಂಸ್ಥೆಗಳಿಂದ ನಾನು ನಿರ್ಗಮಿಸಬೇಕೆಂದು ಬಯಸುತ್ತಿರುವ ಸರ್ಕಾರದ ಇರಾದೆಯನ್ನು ನಾನು ಅರ್ಥೈಸಬಲ್ಲೆ ಹಾಗೂ ಆ ಇರಾದೆಯಂತೆ ನಡೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next