Advertisement

ವಿಮಾನ ದುರಂತದಲ್ಲಿ ಟಾರ್ಜನ್ ಸಿನಿಮಾ ನಟ ಲಾರಾ, ಪತ್ನಿ ಸೇರಿ ಏಳು ಮಂದಿ ಸಾವು

09:43 AM May 31, 2021 | Team Udayavani |

ವಾಷಿಂಗ್ಟನ್: ಬಾಲಿವುಡ್ ನ ಟಾರ್ಜನ್ ಸಿನಿಮಾದ ನಟ ಜೋ ಲಾರಾ, ಅವರ ಪತ್ನಿ ಸೇರಿದಂತೆ ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಫ್ಲೋರಿಡಾದ ಪಾಮ್ ಬೀಚ್ ನ ಸ್ಮ್ಥರ್ನಾದ ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ ತಂಡ(ಆರ್ ಸಿಎಫ್ ಆರ್) ಫೇಸ್ ಬುಕ್ ನಲ್ಲಿ ವಿವರಿಸಿದೆ.

ವಿಮಾನದಲ್ಲಿ ಬಾಲಿವುಡ್ ನಟ ಲಾರಾ ಸೇರಿದಂತೆ ಏಳು ಮಂದಿ ಇದ್ದಿರುವುದಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಖಚಿತಪಡಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಶನಿವಾರ ರಾತ್ರಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಆರ್ ಸಿಎಫ್ ಆರ್ ಕಮಾಂಡರ್ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಮೈದಾನದ ಸುಮಾರು ಅರ್ಧ ಮೈಲು ದೂರದಲ್ಲಿ ವಿಮಾನದ ಹಲವಾರು ತುಂಡುಗಳು ಮತ್ತು ಮಾನವನ ಅವಶೇಷಗಳು ರಕ್ಷಣಾ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವುದಾಗಿ ಆರ್ ಸಿಎಫ್ ಆರ್ ತಿಳಿಸಿದೆ. 1989ರ ಟೆಲಿವಿಷನ್ ಸಿನಿಮಾ “ಟಾರ್ಜನ್ ಇನ್ ಮ್ಯಾನಹಟ್ಟನ್” ನಲ್ಲಿ ಲಾರಾ ನಟಿಸಿದ್ದರು. ನಂತರ ಟೆಲಿವಿಷನ್ ಸರಣಿಯಾದ ಟಾರ್ಜನ್; ದ ಎಪಿಕ್ ಅಡ್ವೆಂಚರಸ್ ನಲ್ಲಿ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next