Advertisement

ಸೀಲ್‌ಡೌನ್‌ ಪ್ರದೇಶದ ಜನರಿಗೆ ದಿನಸಿ ವಿತರಣೆ

03:42 PM May 27, 2020 | Team Udayavani |

ತರೀಕೆರೆ: ಪಟ್ಟಣದ ಕೋಡಿಕ್ಯಾಂಪ್‌ನಲ್ಲಿ ವಾಸವಿದ್ದ ಮಹಿಳೆಗೆ ಕೋವಿಡ್ ಸೋಂಕು ಕಾಣಿಸಿಕೊಂಡು 6 ದಿನಗಳು ಕಳೆದಿವೆ. ಆದರೆ, ಆಕೆಗೆ ಕೋವಿಡ್ ಹೇಗೆ ತಗುಲಿತು ಎನ್ನುವುದು ನಿಗೂಢವಾಗಿಯೇ ಉಳಿದಿದ್ದು, ಜಿಲ್ಲಾಡಳಿತಕ್ಕೆ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಸೀಲ್‌ಡೌನ್‌ ಪ್ರದೇಶದ ಜನರಿಗೆ ತಹಶೀಲ್ದಾರ್‌ ಗೀತಾ ಪುರಸಭೆ ಸಿಬ್ಬಂದಿ ಮೂಲಕ ದಿನಸಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

Advertisement

ಆಕೆಯ ಪ್ರಾಥಮಿಕ ಮತ್ತು ದ್ವಿತೀಯ ಸಂಪಕದಲ್ಲಿದ್ದ 14 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಅವರಲ್ಲಿ ಯಾವುದೇ ಸೊಂಕು ಕಂಡುಬಂದಿಲ್ಲ. ಮಹಿಳೆ ವಾಸವಿದ್ದ ಮನೆಯ ಸುತ್ತಮುತ್ತಲಿನ ಆರು ಬೀದಿಗಳನ್ನು ಸೀಲ್‌ ಡೌನ್‌ ಮಾಡಲಾದ ಹಿನ್ನೆಲೆಯಲ್ಲಿ ಅಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದಿಗ್ಧ ಸಮಯದಲ್ಲಿ ಹಲವಾರು ಕುಟುಂಬಗಳು ಅಕ್ಷರಶಃ ಬೀದಿಗೆ ಬಂದಿದ್ದವು. ಇದನ್ನು ಅರಿತ ತಹಶೀಲ್ದಾರ್‌ ಸಿ.ಜಿ.ಗೀತಾ ಕರ್ತವ್ಯದ ಜೊತೆಗೆ ಮಾನವೀಯತೆಯನ್ನೂ ಮೆರೆದಿದ್ದಾರೆ.

ಆ ಭಾಗದಲ್ಲಿ ವಾಸವಾಗಿರುವ 35 ಕುಟುಂಬಗಳಿಗೆ ಆಹಾರದ ಕೊರತೆ ಉಂಟಾಗಿತ್ತು. ಮಂಗಳವಾರ ಬೆಳಗ್ಗೆ ಹಾಲು ವಿತರಿಸಲು ಹೋದ ಪುರಸಭೆ ಸಿಬ್ಬಂದಿ ಮುಂದೆ ಆ ಕುಟುಂಬಗಳ ಜನರು ಕಣ್ಣೀರು ಹಾಕಿದ್ದರು. ಸಿಬ್ಬಂದಿ ವಿಡಿಯೋ ಕೂಡ ಮಾಡಿದ್ದರು. ಇದನ್ನು ಅರಿತ ತಹಶೀಲ್ದಾರ್‌ ಸಿ.ಜಿ.ಗೀತಾ, ತಕ್ಷಣ ಅವರಿಗೆ ಒಂದು ವಾರಕ್ಕೆ ಆಗುವ ದಿನಸಿ ಸಾಮಗ್ರಿಗಳನ್ನು ತಮ್ಮ ಸ್ವಂತ ಹಣದಿಂದ ಖರೀದಿಸಿ, ಪುರಸಭೆ ಅಧಿಕಾರಿಗಳಿಗೆ ಹಸ್ತಾಂತರಿಸಿ ಸೀಲ್‌ಡೌನ್‌ ಭಾಗದಲ್ಲಿದ್ದ ಜನರಿಗೆ ವಿತರಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಕೆಲವು ಮುಖಂಡರು ಕೂಡ ಈಗಾಗಲೇ ಲಾಕ್‌ಡೌನ್‌ ಸಮಯದಲ್ಲಿ ಬಡಜನರ ಅಗತ್ಯಗಳನ್ನು ಪೂರೈಸಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಸೀಲ್‌ಡೌನ್‌ ಮುಂದುವರಿಯಲಿದ್ದು, ಅಲ್ಲಿರುವ ಕುಟುಂಬಗಳಿಗೆ ನೆರವಿನ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next