Advertisement

ತರೀಕೆರೆ: ತಂಪೆರೆದ ಮಳೆ

01:08 PM Jun 01, 2020 | Naveen |

ತರೀಕೆರೆ: ಕಳೆದ ಹನ್ನೆರೆಡು ದಿನಗಳಿಂದ ಆಗ್ಗಾಗ್ಗೆ ಮೋಡ ಕವಿದ ವಾತಾವರಣ, ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಶನಿವಾರ ರಾತ್ರಿ ಮತ್ತು ಭಾನುವಾರ ಸುರಿದ ಮಳೆ ತಂಪೆರೆದಿದೆ. ಹಿಂಗಾರು ಆರಂಭವಾಗಿದ್ದರೂ ತಾಲೂಕಿನ ಕೆಲವು ಭಾಗದಲ್ಲಿ ಉತ್ತಮ ಮಳೆಯಾಗಿರಲಿಲ್ಲ. 20 ದಿನಗಳ ಹಿಂದೆ ಭಾರೀ ಮಳೆ- ಗಾಳಿಗೆ ತೋಟಗಾರಿಕಾ ಬೆಳೆಗಳು ನೆಲ ಕಚ್ಚಿದ್ದವು. ಭಾನುವಾರ ಸುರಿದ ಮಳೆ ರೈತರ ಮೊಗದಲ್ಲಿ ಹರ್ಷ ತಂದಿದೆ.

Advertisement

ಹದ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಕೋವಿಡ್ ಲಾಕ್‌ಡೌನ್‌ ಕಾರಣ ಮನೆಯಲ್ಲಿ ಉಳಿದಿದ್ದ ರೈತರು ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಳೆ ಸಹಕಾರಿಯಾಗಲಿದೆ. ಲಕ್ಕವಳ್ಳಿ ಹೋಬಳಿಯ ಕರಕುಚ್ಚಿ, ಕೆಂಚಿಕೊಪ್ಪ, ಲಕ್ಕವಳ್ಳಿ, ಮುಡಗೋಡು, ಕಸಬಾ ಹೋಬಳಿ ಮತ್ತು ಪಟ್ಟಣದಲ್ಲಿ ಉತ್ತಮ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next