ಭಾರತೀಯ ಚಿತ್ರರಂಗವೇ ಒಂದು ಕ್ಷಣ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ಕೆಜಿಎಫ್ ಸಿನಿಮಾ. ಚಾಪ್ಟರ್ 1 ಈಗಗಲೇ ರಿಲೀಸ್ ಆಗಿದ್ದು, ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 2 ಗೆ ಕಾಯುತ್ತಿದ್ದಾರೆ. ಈ ಹಿಂದೆ ಸಿನಿಮಾ ತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದು, ಇದೇ ಜುಲೈ 16 ರಂದು ತೆರೆಗೆ ಬರುತ್ತದೆ ಎಂದು ಹೇಳಿತ್ತು. ಆದ್ರೆ ಸದ್ಯದ ಮಾಹಿತಿ ಪ್ರಕಾರ ನಿಗದಿ ಮಾಡಿದ ದಿನಾಂಕದಂದು ಕೆಜಿಎಫ್ ಚಿತ್ರ ರಿಲೀಸ್ ಆಗಲ್ವಂತೆ.
ಹೌದು ಬಾಲಿವುಡ್ ಸಿನಿಮಾ ವಿಮರ್ಷಕ ತರಣ್ ಆದರ್ಶ ಟ್ವೀಟ್ ಒಂದನ್ನು ಮಾಡಿದ್ದು, ಯಶ್ ಅಭಿಮಾನಿಗಳಲ್ಲಿ ನಿರಾಸೆಯಾದಂತಿದೆ. ಕೆಜಿಎಫ್ 2 ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಹ ಮುಗಿದಿದ್ದು, ರಿಲೀಸ್ ಯೋಜನೆ ನಡೆಯುತ್ತಿದೆ. ಈ ನಡುವೆ ದೇಶದಲ್ಲಿರುವ ಕೋವಿಡ್ ಪರಿಸ್ಥಿತಿ ಗಮನಿಸಿದರೆ ಜುಲೈ 16ಕ್ಕೆ ಕೆಜಿಎಫ್ ಥಿಯೇಟರ್‌ಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿದೆ.
ದೇಶದ ಚಿತ್ರಮಂದಿರಗಳ ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುವವರೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬರಲ್ಲ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು, ಈ ಮೊದಲು ಪ್ರಕಟಿಸಿದ ದಿನಾಂಕದಿಂದ ಚಿತ್ರತಂಡ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ.