Advertisement

ತಾರಕಾಸುರನಿಗೆ ಶಿವಣ್ಣ ಹಾಡು

11:05 AM Jul 11, 2018 | Team Udayavani |

ಶಿವರಾಜಕುಮಾರ್‌ ಚಿತ್ರಗಳಲ್ಲಿ ಹಾಡುವುದು ಹೊಸದೇನಲ್ಲ. ಆದರೆ, ಇತ್ತೀಚೆಗೆ ಅವರು ಹಾಡಿದ್ದು ಕಡಿಮೆ. ಈಗ ‘ತಾರಕಾಸುರ’ ಚಿತ್ರಕ್ಕೆ ಹಾಡಿದ್ದಾರೆ. ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ನಾಯಕನ ಪರಿಚಯಿಸುವ ಹಾಡಿಗೆ ಶಿವರಾಜಕುಮಾರ್‌ ಅವರ ಧ್ವನಿ ಇದ್ದರೆ ಚೆನ್ನಾಗಿರುತ್ತೆ ಎಂದು ನಿರ್ಧರಿಸಿದ ಚಿತ್ರತಂಡ, ಶಿವರಾಜಕುಮಾರ್‌ ಬಳಿ ಹೋಗಿ, ಹಾಡುವಂತೆ ಮನವಿ ಮಾಡಿದ್ದಾರೆ.

Advertisement

ಚಿತ್ರದ ಗೀತೆಯ ಸಾಲುಗಳನ್ನು ಕೇಳಿದ ಶಿವರಾಜಕುಮಾರ್‌, ಹಾಡುವುದಾಗಿ ಗ್ರೀನ್‌ಸಿಗ್ನಲ್‌ ಕೊಟ್ಟು, ಇತ್ತೀಚೆಗೆ ಆಕಾಶ್‌ ಆಡಿಯೋದಲ್ಲಿ ಹಾಡಿದ್ದಾರೆ. ಅಂದಹಾಗೆ, ಕವಿರಾಜ್‌ ಬರೆದ “ಕನ್ನಡ ಕಲಿಯೋ..’ ಎಂಬ ಹಾಡು ಹಾಡಿದ ಶಿವರಾಜಕುಮಾರ್‌, ಹಾಡಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಹೀರೋ ವೈಭವ್‌ ಅವರನ್ನು ಪರಿಚಯಿಸುವ ಹಾಡು ಇದು.

ಅವರ ಇಂಟ್ರಡಕ್ಷನ್‌ ಸಾಂಗ್‌ ಕಲರ್‌ಫ‌ುಲ್‌ ಆಗಿ ಚಿತ್ರೀಕರಿಸಬೇಕು ಮತ್ತು ಶಿವರಾಜಕುಮಾರ್‌ ಅವರ ಧ್ವನಿ ಇರಬೇಕು ಅಂತ ತೀರ್ಮಾನಿಸಿದ ಚಿತ್ರತಂಡಕ್ಕೆ ಈಗ ಖುಷಿಯಾಗಿದೆ. ಜುಲೈ 12 ರಂದು ಶಿವರಾಜಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ಅವರಿಂದಲೇ ಚಿತ್ರದ ಟೀಸರ್‌ ಬಿಡುಗಡೆ ಮಾಡಿಸಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.

ಈಗಾಗಲೇ “ತಾರಕಾಸುರ’ ಚಿತ್ರ ಪೂರ್ಣಗೊಂಡಿದ್ದು, ಜುಲೈ ಅಂತ್ಯದಲ್ಲಿ ಪ್ರಥಮ ಪ್ರತಿ ಬರಲಿದ್ದು, ಆಗಸ್ಟ್‌ನಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ. ಚಿತ್ರವನ್ನು ನರಸಿಂಹಲು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡ್ಯಾನಿ ಸಫಾನಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದ ನಾಯಕಿಯಾಗಿ ಮಾನ್ವಿತಾ ನಟಿಸಿದ್ದಾರೆ. ಚಿತ್ರಕ್ಕೆ ಧರ್ಮ ವಿಶ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next