Advertisement

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

10:38 PM May 21, 2024 | Team Udayavani |

ಬೆಂಗಳೂರು: ಚೀನಾದಿಂದ ಖರೀದಿಸಿದ ಯಂತ್ರಗಳ ಮೂಲಕ ಅನ್ಯ ಪಕ್ಷದ ರಾಜಕೀಯ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಗಂಭೀರ ಆರೋಪ ಮಾಡಿದ್ದು, ಇಂಥ ಯಂತ್ರಗಳು ರಾಜ್ಯಕ್ಕೆ ಎಷ್ಟು ಬಂದಿವೆ? ಯಾರ್ಯಾರ ಮನೆಯಲ್ಲಿ ಇದೆ ಎಂದು ಸಿಬಿಐ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

Advertisement

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಸೇರಿ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಜಿಲ್ಲಾಧ್ಯಕ್ಷರ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, 40-50 ಲಕ್ಷ ರೂ. ಕೊಟ್ಟರೆ ಚೀನಾದಿಂದ ಇಂತಹ ಫೋನ್‌ ಟ್ಯಾಪಿಂಗ್‌ ಯಂತ್ರವನ್ನು ಅಕ್ರಮವಾಗಿ ಖರೀದಿಸಬಹುದಂತೆ. ಫೋನ್‌ ಟ್ಯಾಪಿಂಗ್‌ ಎಂಬುದು ಅಕ್ರಮ. ಚೀನಾದಿಂದ ಖರೀದಿಸಿದ ಫೋನ್‌ ಟ್ಯಾಪಿಂಗ್‌ ಯಂತ್ರಗಳು ಕರ್ನಾಟಕಕ್ಕೆ ಎಷ್ಟು ಬಂದಿವೆ, ಯಾರ್ಯಾರ ಮನೆಯಲ್ಲಿ ಇದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.

ವಿಪಕ್ಷದವರ ಫೋನ್‌ ಟ್ಯಾಪಿಂಗ್‌ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ನನಗೂ ಹೇಳಿ¨ªಾರೆ. ಸರಕಾರ ಫೋನ್‌ ಟ್ಯಾಪಿಂಗ್‌ ಮಾಡುತ್ತಿಲ್ಲ ಎಂದಾದರೆ ಇಂಥ ಯಂತ್ರಗಳು ಎಲ್ಲೆ ಲ್ಲಿ ಇವೆ ಎಂದು ತನಿಖೆ ಮಾಡಲಿ. ಅಂಥ ಯಂತ್ರಗಳನ್ನು ವಶಕ್ಕೆ ಪಡೆಯಲಿ. ಆಗ ಯಾರು ಮಾಡಿ¨ªಾರೆ, ಯಾರು ಮಾಡಿಸಿ¨ªಾರೆ ಎಂಬ ಅಂಶ ಬಯಲಿಗೆ ಬರಲಿದೆ. ಫೋನ್‌ ಟ್ಯಾಪಿಂಗ್‌ ಮಾಡುವುದು ಅಪರಾಧ. ಅಂಥವರನ್ನೆಲ್ಲ ಜೈಲಿಗೆ ಕಳುಹಿಸಬೇಕು. ಈ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next