Advertisement

Congress: ನಾವು ಅಪರೇಷನ್ ಗೆ ಕೈ ಹಾಕುವುದಿಲ್ಲ:ಪಕ್ಷ ಸೇರುವವರ ವಿರುದ್ದ ತನ್ವೀರ್ ಸೇಠ್ ಕಿಡಿ

02:35 PM Aug 22, 2023 | Team Udayavani |

ಮೈಸೂರು: ರಾಜ್ಯದಲ್ಲಿ ಮತ್ತೆ ಕುತೂಹಲ ಕೆರಳಸಿರುವ ಶಾಸಕರ ಪಕ್ಷಾಂತರಕ್ಕೆ ಶಾಸಕ ತನ್ವೀರ್ ಸೇಠ್ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. “ನಾವು ಅಪರೇಷನಗೆ ಕೈ ಹಾಕುವುದಿಲ್ಲ. ನಾವು ಅಪರೇಷನ್ ಹಸ್ತ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆ ಇಲ್ಲ. ಜನರು ಬದಲಾವಣೆ ಬಯಸಿ ನಮಗೆ 136 ಸ್ಥಾನ ಕೊಟ್ಟಿದ್ದಾರೆ” ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಿನ ರಾಜಕೀಯ ಸನ್ನಿವೇಶ ಯಾವುದೂ ಸರಿಯಿಲ್ಲ. ಹೀಗಾಗಿಯೇ ನಾನು ನಿವೃತ್ತಿಗೆ ಮುಂದಾಗಿದ್ದು. ಪಕ್ಷಾಂತರ ಮಾಡುವವರ ವಿರುದ್ಧ ಎಷ್ಟೇ ಕಾನೂನು ಬಿಗಿ ಮಾಡಿದರು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಹೋಗುವವರಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಪಕ್ಷ ಬಿಟ್ಟು ಮತ್ತೆ ಪಕ್ಷಕ್ಕೆ ಬರುವವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ನಾವು ಯಾರಿಗೂ ಆಹ್ವಾನ ಕೊಟ್ಟಿಲ್ಲ. ಪಕ್ಷಕ್ಕೆ ಬರುವವರು ನಮ್ಮ ಬಳಿ ಮಾತನಾಡಿಲ್ಲ‌. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದರು.

ಎಸ್.ಟಿ ಸೋಮಶೇಖರ್ ಸಿಎಂ ಭೇಟಿಯಾಗಿರುವುದು ಕ್ಷೇತ್ರದ ಕೆಲಸದ ವಿಚಾರಕ್ಕೆ. ಪಕ್ಷ ಸೇರುವ ಉಹಾಪೋಹದ ವಿಚಾರಕ್ಕೆ ಎಸ್.ಟಿ ಸೋಮಶೇಖರ್ ಉತ್ತರ ಕೊಡಬೇಕು ಎಂದರು.

ತಮಿಳುನಾಡಿಗೆ ನೀರು‌ ಬಿಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ ನೀರು ನ್ಯಾಯಾಧೀಕರಣ ಬಂದ ಮೇಲೆ ಎಲ್ಲಾ ಸಂಧರ್ಭದಲ್ಲೂ ನಮ್ಮ ಮೇಲೆ ಇರುವ ಜವಾಬ್ದಾರಿ ನಿರ್ವಹಣೆ ಮಾಡುವಂತದ್ದಾಗಿದೆ. ಎಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿದ್ದಾರೆ ಎಂದು ಗೊತ್ತಿಲ್ಲ. ಕಾವೇರಿ ನೀರಾವರಿ ಸಲಹಾ ಸಮಿತಿ ರೈತರಿಗಾಗಿ ನೀರು ಬಿಡಲು ತೀರ್ಮಾನ ತೆಗೆದುಕೊಂಡಿದೆ. ಸಿಎಂ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಕಾದು ನೋಡೋಣ. ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎಂಬುದನ್ನು ನ್ಯಾಯಾಧೀಕರಣದಲ್ಲಿ ಸ್ಪಷ್ಟವಾಗಿ ಹೇಳಿದೆ. ಸಂಕಷ್ಟ ಸಮಯದಲ್ಲಿ ಸೂತ್ರವನ್ನು ಸಹ ಅದರಲಿ ಅಳವಡಿಸಿದೆ. ಸಿಎಂ, ನೀರಾವರಿ ಸಚಿವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ ಎಂದರು.

Advertisement

ಬಿಜೆಪಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ಬಿಜೆಪಿ ಸಹ ಅಧಿಕಾರ ನಡೆಸಿದೆ. ಸರ್ವ ಪಕ್ಷ ಸಭೆಯಲ್ಲಿ ಯಾರು ಕುಳಿತು ಮಾತನಾಡುತ್ತಾರೆ. ಬಿಜೆಪಿ ತನ್ನ ಅಸ್ತಿತ್ವವನ್ನ ತಾನೇ ಕಳೆದುಕೊಳ್ಳುತ್ತಿದೆ. ಮೊದಲು ಪ್ರತಿ ಪಕ್ಷದ ನಾಯಕನ ಆಯ್ಕೆ ಮಾಡಿ ಸಭೆಯಲ್ಲಿ ಕುಳಿತು ಮಾತನಾಡಲಿ. ಅಧಿಕಾರದಲ್ಲಿರುವ ನಮ್ಮ ಪಕ್ಷಕ್ಕೆ ಸಲಹೆಗಳನ್ನು ಕೊಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next