Advertisement

ತನುಶ್ರೀ ಮುಡಿಗೆ ಇನ್ನೊಂದು ವಿಶ್ವ ದಾಖಲೆ

09:12 PM Aug 15, 2021 | Team Udayavani |

ಉಡುಪಿ: ತನುಶ್ರೀ ಅವರು ನಲವತ್ತ ಮೂರು ನಿಮಿಷ 18 ಸೆಕೆಂಡ್‌ನ‌ಲ್ಲಿ 245 ಯೋಗಾಸನಗಳನ್ನು ಮಾಡುವ ಮೂಲಕ ಗೋಲ್ಡನ್‌ ಬುಕ್‌ ಆಫ್ ರೆಕಾರ್ಡ್‌ನಲ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.

Advertisement

ರವಿವಾರ ಪರ್ಯಾಯ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶೀರ್ವಾದಗಳೊಂದಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ತನುಶ್ರೀ ಯೋಗಾಸನ ಕ್ಲಿಷ್ಟಕರ ಭಂಗಿಯನ್ನು ಪ್ರದರ್ಶಿಸಿದರು.

ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯದ ಮುಖ್ಯಸ್ಥ ಮನೀಶ್‌ ಮಾತನಾಡಿ, ನಾನು ಇಲ್ಲಿಯವರೆಗೆ ಎರಡು ಸಾವಿರ ದಾಖಲೆ ನೋಡಿದ್ದೇನೆ. ತನುಶ್ರೀಯ ಈ ದಾಖಲೆ ಅದ್ಭುತವಾಗಿದೆ. ಹಿಂದಿನ ದಾಖಲೆಯಲ್ಲಿ 1 ಗಂಟೆಯಲ್ಲಿ 145 ಆಸನದ ದಾಖಲೆ ಮುರಿದಿದ್ದಾರೆ ಎಂದರು.

ಇದನ್ನೂ ಓದಿ:ಭಾರತ ಪಾಕ್ ಗಡಿಯಲ್ಲೂ ಸ್ವಾಂತಂತ್ರ್ಯೋತ್ಸವದ ಸಂಭ್ರಮ..! ಸೇನೆಯ ಪೌರುಷ ಪ್ರದರ್ಶನ..!

ತನುಶ್ರೀ ಪಿತ್ರೋಡಿ ಮಾತನಾಡಿ, ಲಾಕ್‌ಡೌನ್‌ ಅವಧಿಯಲ್ಲಿ 180ಕ್ಕೂ ಅಧಿಕ ಆಸನಗಳನ್ನು ಕಲಿತೆ. ಜತೆಗೆ ಗುರುಗಳು ಸೂಚಿಸಿದ ಆಸನಗಳು ಸೇರಿದಂತೆ 245 ಆಸನಗಳನ್ನು ಸತತ ಪರಿಶ್ರಮದ ಮೂಲಕ ನಿಗದಿತ ಸಮಯದ ಮಿತಿಯೊಳಗೆ ಮಾಡಲು ಸಾಧ್ಯವಾಗಿದೆ. 7ನೇ ವಿಶ್ವದಾಖಲೆಯಲ್ಲಿ ಹೆಸರು ದಾಖಲಾಗಿರುವುದು ಸಂತಸ ತಂದಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಭಾರತೀಯ ಯೋಧರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಉದ್ಯಾವರ ಪಿತ್ರೋಡಿ ಉದಯ್‌ ಕುಮಾರ್‌ -ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೈಂಟ್‌ ಸಿಸಿಲಿಯ ಕನ್ನಡ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪರ್ಯಾಯ ಶ್ರೀ ಆದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ ಐಷಾರಾಮಿ ಜೀವನದ ಹಿಂದೆ ಬಿದ್ದಿರುವ ಸಮಾಜ ಕೇವಲ ಸುಖ ಪಡೆಯಲು ಹಾತೊರೆಯುತ್ತಿದೆ. ಅಧ್ಯಾತ್ಮ, ಯೋಗದತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಮನುಷ್ಯ ಪ್ರಕೃತಿಯಿಂದ ವಿಮುಖನಾಗುತ್ತಿರುವುದರಿಂದ ಸಮಸ್ಯೆ ಸೃಷ್ಟಿಯಾಗುತ್ತಿವೆ.

ಪ್ರಕೃತಿಗೆ ಹತ್ತಿರವಾಗಿ ಬದುಕಿದರೆ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಿದರು.

ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸದಸ್ಯೆ ರಶ್ಮೀ ಚಿತ್ರರಂಜನ್‌ ಭಟ್‌, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಡಾ| ಶೋಭಿತ್‌, ಬಡಗುಬೆಟ್ಟು ಕ್ರೆಡಿಟ್‌ ಕೋ.ಆಪ್‌.ಸೊಸೈಟಿ ಆಡಳಿತ ನಿರ್ದೇಶಕ ಜಯಕರ್‌ ಶೆಟ್ಟಿ ಇಂದ್ರಾಳಿ, ದಿವಾಕರ್‌ ಸನೀಲ್‌, ಯೋಗ ಗುರು ರಾಮಕೃಷ್ಣ ಕೊಡಂಚ, ನರೇಂದ್ರ ಕಾಮತ್‌ ಕಾರ್ಕಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next