ಕೊರೊನಾ ಕಠಿಣ ಸಮಯದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿ ತನುಜಾ ವೈದ್ಯಕೀಯ ಪ್ರವೇಶ ಪರೀಕ್ಷೆ ಬರೆದ ಘಟನೆ ತುಂಬಾ ಸುದ್ದಿಮಾಡಿತ್ತು. ಇದೀಗ ಇದೇ ಘಟನೆ ಆಧಾರವಾಗಿಟ್ಟುಕೊಂಡು ನವಯುವಕರ ತಂಡ ಸಿನಿಮಾವಾಗಿ ನಿರ್ಮಿಸಿದೆ. “ತನುಜಾ’ ಎಂಬ ಶೀರ್ಷಿಕೆಯಿಂದಲೇ ತಯಾರಾಗಿರುವ ಚಿತ್ರ ತನ್ನ ಟೀಸರ್,ಟ್ರೇಲರ್ ಮೂಲಕ ಸಾಕಷ್ಟು ಮೆಚ್ಚುಗೆ ಪಡೆದಿದ್ದು,ಬಿಡುಗಡೆಗೆ ಸಜ್ಜಾಗಿದೆ. ಇದೀಗ ಚಿತ್ರ ತಂಡ ಚಿತ್ರದಆಡಿಯೋ ಬಿಡುಗಡೆಗೊಳಿಸಿದೆ. ಚಿತ್ರ ಫೆ.3 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ನಿರ್ದೇಶಕ ಹರೀಶ್ ಎಂ ಡಿ ಹಳ್ಳಿ ಮಾತನಾಡಿ, “ನಮ್ಮ ಚಿತ್ರದ ಟ್ರೇಲರ್‌ಗೆ ಎಲ್ಲೆಡೆಯಿಂದ ಉತ್ತಮಪ್ರತಿಕ್ರಿಯೆ ದೊರೆಯುತ್ತಿದೆ. ಚಿತ್ರದಲ್ಲಿ 16ಗಂಟೆಯಲ್ಲಿ ನಡೆಯುವ ಸನ್ನಿವೇಶಗಳನ್ನುತೋರಿಸಲಾಗಿದೆ. ರಾತ್ರಿ 7.30ಯಿಂದಆರಂಭವಾಗಿ ಮರುದಿನ 1.30 ವರೆಗೆ ನಡೆಯುವಕಥೆಯ ಪಯಣ ಇದಾಗಿದೆ. ರಾಜಕೀಯವಾಗಿ ಏನನ್ನು ತಿರುಚಿಲ್ಲ. ಫೆ.3 ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಎಲ್ಲರ ಪ್ರೋತ್ಸಾಹ ಇರಲಿ ಎಂದರು.
ಸಂಗೀತ ನಿರ್ದೇಶಕ ಪ್ರದ್ಯೊತ್ತನ್ ಮಾತನಾಡಿ, ಚಿತ್ರದಲ್ಲಿ ಮೂರು ಹಾಡುಗಳಿದ್ದು, ಪರ್ವೇಜ್‌ಅಹಮದ್ ಹಾಗೂ ಸ್ನೇಹಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಹಾಡುಗಾರರಾಗಿ ಕಾಲಿಡುತ್ತಿದ್ದಾರೆ. ಜಯಂತ್ ಕಾಯ್ಕಿಣಿ, ಸಂತೋಷ್, ನವೀನ್ ಚಿತ್ರದ ಹಾಡುಗಳಿ ಸಾಹಿತ್ಯ ನೀಡಿದ್ದಾರೆ. ಹಾಡುಗಳು ಉತ್ತಮವಾಗಿ ಮೂಡಿಬಂದಿದೆ ಎಂದು ಹಾಡುಗಳ ಕುರಿತು ಮಾಹಿತಿ ನೀಡಿದರು.
ನಿರ್ಮಾಪಕರಲ್ಲೊಬ್ಬರಾದ ಪ್ರಕಾಶ್ ಮಾತನಾಡಿ, ಹರೀಶ್ ನಮಗೆ ಬಹಳದ ವರ್ಷದ ಪರಿಚಯ, ಉತ್ತಮ ಸ್ನೇಹಿತರು. ಒಂದು ದಿನ ಹೀಗೊಂದು ನೈಜ ಘಟನೆ ಆಧಾರಿತ ಚಿತ್ರ ಮಾಡುತ್ತೇನೆ, ವೈದ್ಯಕೀಯ ಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳನ್ನೇ ತೆರೆ ಮೇಲೆ ತೋರಿಸಬೇಕು ಅಂದಾಗ ಇದು ಸಾಧ್ಯವಾ ಅನಿಸಿತ್ತು, ಹರೀಶ್ ಪ್ರಯತ್ನ ಪಡೋಣ ಆಗುತ್ತೆಅನ್ನುವ ಮನೋಭಾವದಿಂದ ಮುನ್ನುಗ್ಗಿದರು. ಈಗ ಚಿತ್ರ ಬಿಡುಗಡೆಯ ಹಂತದವರೆಗೆ ಬಂದಿದೆ. ಎಲ್ಲರ ಸಹಕಾರ ಇರಲಿ ಎಂದರು.
ಸಪ್ತಾ ಪಾವೂರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ರಘುನಂದನ್ ಎಸ್.ಕೆ, ಸತೀಶ್, ಚಿತ್ಕಲಾ ಬಿರಾದಾರ್ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಚಿವ ಡಾ. ಕೆ. ಸುಧಾಕರ್, ಪತ್ರಕರ್ತ ವಿಶ್ವೇಶ್ವರ್ ಭಟ್ ಅತಿಥಿ ಕಲಾವಿದರಾಗಿ “ತನುಜಾ’ ಸಿನಿಮಾದಲ್ಲಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
“ಬಿಯಾಂಡ್ ವಿಷನ್ ಸಿನಿಮಾಸ್’ ಬ್ಯಾನರ್‌ಅಡಿಯಲ್ಲಿ ಚಂದ್ರಶೇಖರ ಗೌಡ, ಮನೋಜ್ ಬಿ.ಜಿ, ಪ್ರಕಾಶ್ ಮದ್ದೂರು, ಅನಿಲ್ ಷಡಕ್ಷರಿ, ಗಿರೀಶ್ ಕೆ. ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.