Advertisement

ಬೈಕಂಪಾಡಿ ಕೈಗಾರಿಕೆ ಪ್ರದೇಶದ 2 ಲೇನ್‌, ಜೋಕಟ್ಟೆಗೆ ಟ್ಯಾಂಕರ್‌ ನೀರೇ ಗತಿ!

11:13 PM Jan 07, 2023 | Team Udayavani |

ಬೈಕಂಪಾಡಿ: ಬೈಕಂಪಾಡಿ ಕೈಗಾರಿಕೆ ಪ್ರದೇಶದ ಪಣಂಬೂರು ಪೊಲೀಸ್‌ ಠಾಣೆ ಹಿಂಭಾಗದ ಎರಡು ಲೇನ್‌ ಹಾಗೂ ಜೋಕಟ್ಟೆ ರಸ್ತೆಯ ಬೈಕಂಪಾಡಿ ನಾಗಬನ ಸುತ್ತಮುತ್ತ ನೀರಿನ ಸಮಸ್ಯೆ ಉಂಟಾಗಿದ್ದು, ಇದುವರೆಗೂ ಸರಿಪಡಿಸುವ ಕಾಯಕದಲ್ಲೇ ಕುಡ್ಸೆಂಪ್‌ ನಿರತವಾಗಿದೆ.

Advertisement

ಈ ಭಾಗದಲ್ಲಿ ಜಲಸಿರಿ ಯೋಜನೆಯ ಅಂಗವಾಗಿ ಹೊಸ ಪೈಪ್‌ ಲೈನ್‌ ಅಳವಡಿಸಲು ಎಲ್ಲೆಡೆ ಅಗೆಯಲಾಗಿತ್ತು. ಈ ವೇಳೆ ಹಳೆಯ ಕಾಲದ ಪೈಪ್‌ಗ್ಳಿಗೆ ಹಾನಿಯಾಗಿ ನೀರಿನ ಸಂಪರ್ಕವೇ ಕಡಿತಗೊಂಡಿದೆ.

ಗ್ಯಾಲನ್‌ ಗಟ್ಟಲೆ ನೀರು ಕಂಪೆನಿಗೆ ಹಾಗೂ ಕೆಲಸ ಮಾಡುವ ನೂರಾರು ಕಾರ್ಮಿಕರ ಬಳಕೆಗೆ ನೀರು ಅಗತ್ಯ ವಿರುವ ಹಿನ್ನೆಲೆಯಲ್ಲಿ 6 ವಾರಗಳಿಂದ ನೀರಿಲ್ಲದೆ ಕಷ್ಟ ಪಡು ವಂತಾಗಿದೆ. ದುಬಾರಿ ಹಣ ತೆತ್ತು ಖಾಸಗಿ ಟ್ಯಾಂಕರ್‌ ನೀರನ್ನು ಅವಲಂಬಿಸಿದ್ದಾರೆ. ಈ ನಡುವೆ ನೀರಿನ ಸಂಪರ್ಕ ಕಡಿತವಾದ ಸ್ಥಳವನ್ನು ಹಲವು ಬಾರಿ ಹುಡುಕಾಡ ನಡೆಸಿದ್ದರೂ ಮೂಲ ಪತ್ತೆಯಾಗಿಲ್ಲ. ಜಲಸಿರಿಯ ಪೈಪ್‌ಲೈನ್‌ ವಿವಿಧೆಡೆ ಯಾಂತ್ರಿಕವಾಗಿ ಸಣ್ಣ ರಂಧ್ರ ದ ಮೂಲಕ ಗುಂಡಿ ತೋಡಿ ಪೈಪ್‌ ಎಳೆಯುವ ಕಾರಣ ಯಾವ ಭಾಗದಲ್ಲಿ ನೀರಿನ ಕೊಳವೆಗಳಿಗೆ ಹಾನಿಯಾಗಿದೆ ಎಂಬುದು ತಿಳಿಯುವುದೇ ಸವಾಲಿನ ಕೆಲಸವಾಗಿದೆ. ಹೀಗಾಗಿ ಇದುವರೆಗೂ ಈ ಎರಡು ಪ್ರಮುಖ ಲೇನ್‌ಗಳಿಗೆ ನೀರು ಇಲ್ಲದೆ ಪರದಾಡುವಂತಾಗಿದೆ.

ಹೊಸ ಪೈಪ್‌ ಅಳವಡಿಕೆಗೆ ಸೂಚನೆ
ಕೈಗಾರಿಕೆ ಪ್ರದೇಶದ 2 ಮುಖ್ಯ ಭಾಗಗಳಲ್ಲಿ ಕಂಪೆನಿಗಳಿಗೆ ನೀರಿಲ್ಲದೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ. ಪಾಲಿಕೆ ಅಧಿಕಾರಿಗಳಿಗೆ ಈ ಕುರಿತು ಸ್ಥಳ ಪರಿಶೀಲನೆ ಮಾಡಿ, ಜಲಸಿರಿ ವಿಭಾಗದಿಂದಲೇ ಹೊಸ ಪೈಪ್‌ ಹಾಕಿ ನೀರಿನ ಸಂಪರ್ಕ ಜೋಡಿಸಲು ಸೂಚಿಸಿದ್ದೇನೆ. ಇದಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ.
-ಸುಮಿತ್ರಾ ಕರಿಯ, ಸ್ಥಳೀಯ ಮನಪಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next