Advertisement

ತನ್ನ ತಾನ

03:45 AM Jan 15, 2017 | Harsha Rao |

ನನ್ನ ದೇಹದ ಬೂದಿ- ಗಾಳಿಯಲಿ ತೂರಿ ಬಿಡಿ ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ; 
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು ಹುಟ್ಟು ಸಾವಿನಲ್ಲಿ

Advertisement

ಚುಟುಕುಗಳ ಬ್ರಹ್ಮ ದಿನಕರ ದೇಸಾಯಿಯವರ ಈ ಹಾಡು ನಮಗೆ ಹೈಸ್ಕೂಲಿನಲ್ಲಿತ್ತು. ಆವರೆಗೂ ನನಗೆ ಸಾವನ್ನೂ ಇಷ್ಟು ಸುಂದರಗೊಳಿಸಬಹುದೆಂಬ ಕಲ್ಪನೆಯೇ ಇರಲಿಲ್ಲ. ಈಗಲೂ ನಾನು ಈ ಹಾಡನ್ನು ಅಮ್ಮ ಕಲಿಸಿದ ರಾಗದಲ್ಲಿ ಗುನುಗುನಿಸುತ್ತಿರುತ್ತೇನೆ. ಎಂಥ ಅದ್ಭುತ ಪರಿಕಲ್ಪನೆ! ನಾವೋ ಬದುಕಿನÇÉೇನಾದರೂ ಸಾಧಿಸಬೇಕೆಂದು ಬಯಸಿದರೆ, ಕವಿತೆ ಸಾವಿನ ನಂತರದ ಸಫ‌ಲತೆಗೆ ತುಡಿಯುತ್ತದೆ.

“ದೇಹಕ್ಕೆ ಮಾತ್ರ ಸಾವು… ಆತ್ಮಕ್ಕಿಲ್ಲ’ ಎಂದು ಗೀತೆಯಲ್ಲಿ ಕೃಷ್ಣನೂ ಹೇಳಿ¨ªಾನೆ. ಹುಟ್ಟಿದ ಮೇಲೆ ಸಾವು ಅನಿವಾರ್ಯ. ಅದಕ್ಕೆಲ್ಲ ಹೆದರೋದುಂಟಾ? ಎಂದು ಹಿರಿಯರೂ ಆಡುತ್ತಿರುತ್ತಾರೆ. ಆದರೆ ನಾವೆಷ್ಟೇ ಇಂಥಾ ಮಾತುಗಳನ್ನು ಕೇಳಲಿ, ಓದಲಿ, ಸಾವೆಂದಾಕ್ಷಣ ಅರೆಕ್ಷಣವಾದರೂ ನಮ್ಮೊಳಗೆ ತಲ್ಲಣ ಉಂಟಾಗಿಯೇ ಆಗುವುದು. ನನ್ನ ಪ್ರಕಾರ, ನಾವು ನಮ್ಮ ಸಾವಿಗಿಂತಲೂ ನಮ್ಮವರ ಸಾವಿಗೆ, ನಮ್ಮ ಸಾವಿನಾನಂತರ ಅಳುವ ನಮ್ಮವರ ದುಃಖಕ್ಕೆ ಹೆದರುವುದು! ಜೀವನದಲ್ಲಿ ಎದುರಾಗುವ ಸಣ್ಣ ಪುಟ್ಟ , ತುಸು ದೊಡ್ಡ ಸಂಕಷ್ಟಗಳಿಗೆÇÉಾ ನಾವೆÇÉಾ “ಸಾಕಪ್ಪಾ ಈ ಜೀವನ… ಒಮ್ಮೆ ಮುಕ್ತಿ ಕಂಡರೆ ಸುಖ’ ಎಂದು ಹಲುಬುವುದಿದೆ. ಆದರೆ ಇದು ಯಾರ ಮನದಾಳದ ಬಯಕೆಯೂ ಆಗಿರುವುದಿಲ್ಲ. ಅಜ್ಜಿ ಸದಾ ಹೇಳುತ್ತಿದ್ದಳು- “ತಾನು ಸಾಯೆºàಕು ಸತ್ತು ಸ್ವರ್ಗ ಪಡೀಬೇಕು’ ಎಂದು. ಇದರರ್ಥ- ಕಷ್ಟವೋ ಸುಖವೋ ನಮ್ಮ ಬದುಕ ನಾವು ಜೀವಿಸಿಯೇ ಮುಕ್ತಿ ಪಡೆಯಬೇಕೇ ವಿನಾ ಬದುಕೊಡ್ಡುವ ಸವಾಲಿಗೆ ಬೆದರಿ, ಬೆನ್ನು ತೋರಿ ಜೀವನದಿಂದ ವಿಮುಖತೆ ಹೊಂದುವುದು ಸಲ್ಲ ಎಂದು. ಆದರೆ, ಇತ್ತೀಚಿಗೆ ಹರೆಯದ ಹುಡುಗರೇ ಹೆಚ್ಚಾಗಿ ಕಡಿಮೆ ಅಂಕಗಳಂಥ ಕ್ಷುಲ್ಲಕ ಕಾರಣಗಳಿಗೋಸ್ಕರ ತಮ್ಮ ತುಂಬು ಬದುಕನ್ನೇ ಬಲಿಗೊಟ್ಟು, ಆತ್ಮಹತ್ಯೆಯಂಥ ಹೇಡಿ ಕೃತ್ಯಕ್ಕೆ ಮುನ್ನುಗ್ಗುತ್ತಿರುವುದನ್ನು ಕಂಡಾಗ ನಿಜಕ್ಕೂ ಖೇದವೆನಿಸುತ್ತದೆ. ಕೆ. ಎಸ್‌. ನರಸಿಂಹ ಸ್ವಾಮಿಯವರ ಕವಿತೆಯೊಂದರ ಸಾಲು ಸದಾ ಸ್ಮರಣೀಯ- “ಪರೀಕ್ಷೆ ಎಂದರೆ ಹೂವಿನ ಚೆಂಡೆ? ಚಿಂತಿಸಬಾರದು ದುರ್ಗತಿಗೆ’ 
ಎÇÉೋ ಓದಿದ್ದ ನೆನಪು… ನಾವು ಏನನ್ನು ಬಯಸುತ್ತೇವೋ ಅದು ನಮಗೆ ಸಿಗದಿರಬಹುದು. ಆದರೆ, ನಮಗೆ ಏನು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ. ಹುಟ್ಟುತ್ತಲೇ ಬದುಕು ನನ್ನ ಮುಂದೆ ಒಡ್ಡಿದ ಸವಾಲುಗಳ ಮೂಟೆಗೆ ನನ್ನ ಮನೆಯವರೆಂದೂ ನನ್ನ ಸೋಲಗೊಡಲೇ ಇಲ್ಲ. ಇದಕ್ಕೆ ನನ್ನೊಳಗಿನ ಜೀವನ ಪ್ರೀತಿಯೂ ಅಷ್ಟೇ ಕಾರಣವಿದ್ದಿರಬಹುದು. ನಾನಾಗ ಪ್ರçಮರಿಯಲ್ಲಿ¨ªೆ. ನಾವೆÇÉಾ ತಪ್ಪದೇ ಬುನಿಯಾದ್‌ ಎಂಬ ಧಾರಾವಾಹಿಯನ್ನು ನೋಡುತ್ತಿ¨ªೆವು. ಅಲ್ಲಿನ ಪಾತ್ರಗಳ ಸುಖ-ದುಃಖಗಳಲ್ಲಿ ಒಂದಾಗಿ ಹೋಗಿ¨ªೆವು. ಹೀಗಿರುವಾಗ ಇದರ ನಾಯಕನಿಗೆ ಮಾರಕ ರೋಗವೊಂದು ತಗುಲಿದ ಸೂಚನೆ ಬರುತ್ತದೆ. ಆತನ ಬಾಯಿಯಿಂದ ರಕ್ತ ಒಸರತೊಡಗುತ್ತದೆ. ಡಾಕ್ಟರರು ಅವನಿಗೆ ಅಂತಿಮವಾಗಿ ಕ್ಯಾನ್ಸರ್‌ ಎಂದು ಘೋಷಿಸಿ ಕೈಚೆಲ್ಲಲು, ಅವನ ಮನೆಯವರೆಲ್ಲ ಗೋಳಾಡುತ್ತಾರೆ. ಆತನ ಮೊಗದಲ್ಲೂ ವಿಷಾದ. ಅದನ್ನು ನೋಡಿದ್ದೇ, ನನಗೂ ಕ್ಯಾನ್ಸರ್‌ ಬಂದರೆ ಏನಪ್ಪಾ ಗತಿ… ಎಂದು ವಿಪರೀತ ಭಯಗೊಂಡಿ¨ªೆ. ಇದಕ್ಕೆ ಸರಿಯಾಗಿ ಎರಡು ದಿವಸದ ಮೇಲೆ ಬ್ರಶ್‌ ಮಾಡುವಾಗ, ಇನ್ನೇನು ಬೀಳಲಿದ್ದ ಹಲ್ಲಿನ ಎಡೆಯಿಂದ ರಕ್ತ ಒಸರಿ, ನೀರಿನೊಂದಿಗೆ ಮಿಶ್ರಣವಾಗಿ ಬೇಸಿನ್‌ಗೆ ಬೀಳಬೇಕೆ ! ಅಷ್ಟೇ… ಅತ್ತೂ ಅತ್ತೂ… ಸುಸ್ತಾಗಿದ್ದ ನನ್ನನ್ನು ಅಪ್ಪ ಸಮಾಧಾನಿಸಲಾಗದೇ ತತ್‌ಕ್ಷಣ ನಮ್ಮ ಫ್ಯಾಮಿಲಿ ಡಾಕ್ಟರ್‌ ಆಗಿದ್ದ (ಈಗ ವಿಧಿವಶರಾಗಿರುವ) ಡಾ. ಮಾಧವ ಭಂಡಾರಿಯವರ ಬಳಿ ಕರೆದೊಯ್ದಿದ್ದರು. ಅವರು ನಗುತ್ತ ಚೆಕ್‌ಅಪ್‌ ಮಾಡಿದಂತೆ ಮಾಡಿ, “ಏನೂ ಆಗಿಲ್ಲಮ್ಮ… ಗಟ್ಟಿಯಾಗಿದ್ದೀಯಾ… ಕ್ಯಾನ್ಸರೂ ಇಲ್ಲ ಮಣ್ಣೂ ಇಲ್ಲ… ಅವೆಲ್ಲ ಹಾಗೆ ಬರುವುದಿಲ್ಲ. ಭಯ ಬೇಡ’ ಎಂದು ಧೈರ್ಯ ತುಂಬಿ, ನನ್ನ ಸಮಾಧಾನಕ್ಕೆಂದು ಒಂದು ಟಾನಿಕ್‌ ಬಾಟಿÉಯನ್ನು ಫ್ರೀಯಾಗಿ ಕೊಟ್ಟು ಕಳುಹಿಸಿದ್ದರು. 
ಸಾವೆಂದರೆ ಅದು ಕ್ಯಾನ್ಸರ್‌ ! ದೊಡ್ಡ ರೋಗಗಳು ತಗುಲಿದರೆ ಬದುಕಲ್ಲಿಗೇ ಮುಗಿದಂತೇ ಎಂದೇ ಭಾವಿಸಿ¨ªೆ.

ಅತಿಯಾದ ಭೀತಿಯೂ ನಮ್ಮ ಕಣRಟ್ಟಿಸಿಬಿಡುತ್ತದೆ. ಕೇವಲ ಸಾವಿನ ಬಗ್ಗೆಯೇ ಚಿಂತಿಸದೇ, ನಮ್ಮ ಸುತ್ತಮುತ್ತಲಿರುವ ಜೀವನಪ್ರೀತಿಯನ್ನು ಕಣ್ತುಂಬಿಕೊಂಡರೆ, ಅದು ನಮಗೆ ದಾರಿ ತೋರುವುದು, ಸ್ಪಷ್ಟತೆ ನೀಡುವುದು, ಭ್ರಮೆ ಕಳಚುವುದು. ನನಗೆ ಅಂಥ ಹಲವು ಜೀವನ್ಮುಖೀಗಳ ಸಾಂಗತ್ಯ ದೊರಕಿದೆ. ಕ್ಯಾನ್ಸರ್‌ ಬಂದರೂ, ಅದಕ್ಕೂ ಚೆಕ್‌ವೆುàಟ್‌ ಕೊಟ್ಟು ಓಡಿಸಿ, ಸಂತೋಷದಿಂದ ಜೀವನ ಸಾಗಿಸುತ್ತಿರುವ, ಸಾವನ್ನು ದೂರವಿರಿಸಿ ಬದುಕನ್ನು ಪ್ರೀತಿಯಿಂದ ಜೀವಿಸುತ್ತಿರುವ ಅನೇಕಾನೇಕರನ್ನು ಬಲು ಹತ್ತಿರದಿಂದ ನೋಡುತ್ತಿರುವೆ. ಅವರೆಲ್ಲ ನನಗೆ ಮತ್ತಷ್ಟು ಸ್ಥೈರ್ಯ, ಸ್ಫೂರ್ತಿ, ಪ್ರೇರಣೆಯನ್ನು ತುಂಬಿ¨ªಾರೆ. 

ಸುಮಾರು ಇಪತ್ತೈದು ವರ್ಷಗಳ ಹಿಂದೆಯೇ ಕ್ಯಾನ್ಸರ್‌ ಕಾಣಿಸಿಕೊಂಡಿದ್ದರೂ, ಧೃತಿಗೆಡದೇ ತಮ್ಮ ಕಟ್ಟುನಿಟ್ಟಿನ ಜೀವನಕ್ರಮದಿಂದ ಅದರ ಪ್ರಭಾವವನ್ನು ತಗ್ಗಿಸಿಕೊಂಡು, ಸಂಘದ ಹಿರಿಯ ಪ್ರಚಾರಕರಾಗಿ ಎಡೆಬಿಡದೆ ಪ್ರಯಾಣಿಸುತ್ತ¤, ಸಿಕ್ಕಾಗಲೆಲ್ಲ ನನಗೆ ಪ್ರೋತ್ಸಾಹದ ನುಡಿಗಳಿಂದ ಬೆನ್ನು ತಟ್ಟುತ್ತ ಕುಟುಂಬದ ಆತ್ಮೀಯರಾಗಿದ್ದ, ಕೆಲವು ಸಮಯದ ಹಿಂದಷ್ಟೇ ಅಗಲಿದ ನಾ. ಕೃಷ್ಣಪ್ಪನವರು ನೆನಪಾಗುತ್ತಾರೆ. ಆಸ್ಟಿಯೋ ಸರ್ಕೊàಮಾ ಎಂಬ ವಿರಳ ಬೋನ್‌ ಕ್ಯಾನ್ಸರ್‌ ಹದಿವಯಸ್ಸಿನÇÉೇ ತನ್ನನ್ನಾವರಿಸಿದರೂ, ಛಲದಿಂದ, ಅದನ್ನೆದುರಿಸಿ, ಹೋರಾಡಿ, ಇಂದು ಸಂಪೂರ್ಣ ಗುಣಮುಖಳಾಗಿ ಗೆದ್ದು, ನೆಮ್ಮದಿಯ ಬದುಕ ಜೀವಿಸುತ್ತಿರುವ ಗೆಳತಿ ಶ್ರುತಿ ಬಿ. ಎಸ್‌. ಕಣ್ಣೆದುರು ಬರುತ್ತಾರೆ. ಸ್ತನದ ಕ್ಯಾನ್ಸರ್‌ ಧುತ್ತನೆ ಎದುರಾದರೂ, ತಮ್ಮೊಳಗಿನ ಚೈತನ್ಯವನ್ನು ಸೋಲಗೊಡದೇ, ನಗು ನಗುತ್ತಲೇ, ತಮ್ಮ ಹಾಸ್ಯದಿಂದ ಕ್ಯಾನ್ಸರನ್ನೂ ನಗಿಸಿ, ಮಣಿಸಿ, ಈಗ ಸ್ವಸ್ಥರಾಗಿ ನಗುತ್ತಿರುವ ಸ್ನೇಹಿತೆ ಭಾರತಿ ಬಿ. ವಿ. ಮನಸ್ಸಿಗೆ ಬರುತ್ತಾರೆ. ವೃದ್ಧಾಪ್ಯದಲ್ಲಿ ಕಾಡಿದ ಸ್ತನದ ಕ್ಯಾನ್ಸರಿನಿಂದ ತುಸು ಕುಗ್ಗಿದರೂ, ಇÇÉಾ ತಾನು ಬದುಕಿಯೇ ತೀರುವೆನೆಂಬ ಛಲದಿಂದ ಇನ್ನಿಲ್ಲದ ಪ್ರತಿರೋಧ ತೋರಿ, ಕೊನೆಗೆ ನಮ್ಮಿಂದಗಲಿದ ನನ್ನಜ್ಜಿ ಸರಸ್ವತಮ್ಮ ಸ್ಮತಿಪಟಲದಲ್ಲಿ ಮೂಡುತ್ತಾರೆ. ಇವರೆಲ್ಲರೂ ನನಗೆ ಬಹು ದೊಡ್ಡ ಮಾದರಿಯಾಗಿದ್ದಾರೆ, ಸೋತೆನೆಂದಾಗೆಲ್ಲ ಬಡಿದೆಬ್ಬಿಸಿಕೊಳ್ಳುವ ಛಲವ ನೀಡಿ¨ªಾರೆ. ಸಾವೇ ಮನೆಯ ಬಾಗಿಲಿಗೆ ಬಂದರೂ “ಎಲೆ ಸಾವೇ… ನಿಲ್ಲÇÉೇ ಎಂದು ನಿಲ್ಲಿಸಿ, ಇವರೆಲ್ಲ ಬದುಕುತ್ತಿರುವಾಗ, ಈ ಅಂಗವೈಕಲ್ಯ ಒಡ್ಡುವ ಸವಾಲಿಗೆ ಬೆದರಿ ಮಣಿಯುವುದೆ?’ ಎಂದು ಅಡಗಿರುವ ಚೇತನವನ್ನು ಛಾಟಿ ಬೀಸಿ ಎಬ್ಬಿಸುತ್ತಿರುತ್ತೇನೆ. 

Advertisement

ಶಾಲಾ, ಕಾಲೇಜುಗಳ ಪರೀಕ್ಷೆಗಳು, ಅಂಕಗಳು, ಹು¨ªೆಗಳು, ಸೀಟುಗಳು ಇವೆಲ್ಲ ಎಷ್ಟು ಕ್ಷುಲ್ಲಕ ಸಂಗತಿಗಳು- ಈ ವಿರಾಟ್‌ ಬದುಕಿನ ಮುಂದೆ ! ನಮ್ಮ ಎಳೆಯ ಪೀಳಿಗೆಗಳಿಗೆ ಇದನ್ನು ಮನದಟ್ಟು ಮಾಡುವ ಪೋಷಕರು, ಶಿಕ್ಷಕರು ಇಂದು ಅತ್ಯಗತ್ಯವಾಗಿ¨ªಾರೆ. ಗೆಲುವಿರುವುದು ನಮಗೆ ದಕ್ಕಿರುವ ಬದುಕನ್ನು ಜೀವಿಸುವುದರÇÉೇ ವಿನಾ, ಎಂದೋ ಅನಿವಾರ್ಯವಾಗಿರುವ ನಮ್ಮ ಸಾವನ್ನು ಇಂದೇ ಎಳೆದುಕೊಂಡು ಕಣ್ಮುಚ್ಚಿ ಸೋಲುವುದರಲ್ಲಲ್ಲ.

– ತೇಜಸ್ವಿನಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next