Advertisement

ಪ್ರೊ ಕಬಡ್ಡಿ ಹಣಾಹಣಿ: ದಬಾಂಗ್‌ ಡೆಲ್ಲಿಯನ್ನು ಕೆಡವಿದ ತಮಿಳ್‌ ತಲೈವಾಸ್‌

10:58 PM Oct 30, 2022 | Team Udayavani |

ಪುಣೆ: ರವಿವಾರದ ದ್ವಿತೀಯ ಪ್ರೊ ಕಬಡ್ಡಿ ಹಣಾಹಣಿಯಲ್ಲಿ ತಮಿಳ್‌ ತಲೈವಾಸ್‌ 49-39 ಅಂತರದಿಂದ ಬಲಿಷ್ಠ ದಬಾಂಗ್‌ ಡೆಲ್ಲಿಯನ್ನು ಮಣಿಸಿ 3ನೇ ಗೆಲುವನ್ನು ಸಾಧಿಸಿತು. ಇದು ದಬಾಂಗ್‌ ಡೆಲ್ಲಿಗೆ ಎದುರಾದ 4ನೇ ಸೋಲು. ಆದರೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ.

Advertisement

ತಮಿಳ್‌ ತಲೈವಾಸ್‌ ಪರ ರೈಡರ್‌ ನರೇಂದರ್‌ ಅಮೋಘ ಪ್ರದರ್ಶನ ನೀಡಿ 24 ಅಂಕಗಳನ್ನು ಬಾಚಿದರು. ಅಜಿಂಕ್ಯ ಪವಾರ್‌ 6, ಹಿಮಾಂಶು 5 ಅಂಕ ತಂದಿತ್ತರು.

ಡೆಲ್ಲಿ ತಂಡದಲ್ಲಿ ಮಿಂಚಿದವರು ರೈಡರ್‌ ಆಶು ಮಲಿಕ್‌. ಅವರು 14 ಅಂಕ ಗಳಿಸಿರು. ಆದರೆ ಉಳಿದವರಿಂದ ಇದೇ ಮಟ್ಟದ ಆಟ ಕಂಡುಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next