Advertisement

ಉಕ್ರೇನ್‌ ಸೇನೆ ಸೇರಿದ ತಮಿಳುನಾಡು ಯುವಕ

01:34 AM Mar 09, 2022 | Team Udayavani |

ಉಕ್ರೇನ್‌ ಸರಕಾರ ವಿದೇಶಿ ನಾಗರಿಕರನ್ನು ತಮ್ಮ ಸೇನೆಗೆ ಆಹ್ವಾನಿಸಿರುವ ಬೆನ್ನಲ್ಲೇ ಭಾರತದ ತಮಿಳುನಾಡಿನ ಯುವಕನೊಬ್ಬ ಉಕ್ರೇನ್‌ ಸೇನೆ ಸೇರಿದ್ದಾನೆ. ಆ ದೇಶದ ಪರ ಹೋರಾಟ ಮಾಡುವ ಸಂಘಟನೆ ಜಾರ್ಜಿಯನ್‌ ನ್ಯಾಶನಲ್‌ ಲೀಜನ್‌ (Georgian National Legion) ಎಂಬುದಕ್ಕೆ ಸೇರಿದ್ದಾನೆ.

Advertisement

ಉಕ್ರೇನ್‌ನ ಖಾರ್ಕಿವ್‌ ಏವಿಯೇ ಶನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಕ್ಕೆಂದು ತೆರಳಿದ್ದ ಕೊಯಮತ್ತೂರಿನ ಥುಡಲಿಯೂರಿನ 21 ವರ್ಷದ ಯುವಕ ಸೈನಿಕೇಶ್‌ ರವಿಚಂದ್ರನ್‌ ಉಕ್ರೇನ್‌ ಸೇನೆಗೆ ಸೇರಿರುವುದಾಗಿ ಹೆತ್ತವರಿಗೆ ತಿಳಿಸಿದ್ದಾನೆ.

ಸೈನಿಕೇಶ್‌ ರವಿಚಂದ್ರನ್‌ಗೆ ಸೇನೆಯ ಬಗ್ಗೆ ಹೆಚ್ಚು ಆಸಕ್ತಿಯಿದ್ದು ಭಾರತೀಯ ಸೇನೆ ಸೇರುವುದಕ್ಕೆಂದು 2 ಬಾರಿ ಅರ್ಜಿ ಸಲ್ಲಿಸಿದ್ದ. ಆದರೆ ಎತ್ತರ ಕಡಿಮೆ ಎನ್ನುವ ಕಾರಣಕ್ಕೆ ತಿರಸ್ಕೃತಗೊಂಡಿದ್ದ. ಹಾಗೆಯೇ ಅಮೆರಿಕ ಸೇನೆ ಯಿಂದಲೂ ತಿರಸ್ಕೃತಗೊಂಡಿದ್ದ ಎಂದು ಆತನ ತಾಯಿ ಝಾನ್ಸಿ ಲಕ್ಷ್ಮೀಬಾಯಿ ಹೇಳಿದ್ದಾರೆ. ಐದು ದಿನಗಳ ಹಿಂದೆ ಆತನ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೆ.

ಯುದ್ಧ ಆರಂಭವಾದ ಮೇಲೆ ಆತನೊಂದಿಗೆ ಸಂಪರ್ಕವೇ ಕಡಿತಗೊಂಡಿತ್ತು. ಅನಂತರ ಆತನೇ ಕರೆ ಮಾಡಿ ಸೇನೆ ಸೇರಿದ್ದಾಗಿ ಹೇಳಿದ್ದಾನೆ. ಭಾರತಕ್ಕೆ ವಾಪಸು ಬರಲು ಒಪ್ಪುತ್ತಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next