Advertisement

Tamil Nadu: ಹತ್ತು ಮಸೂದೆ ಮರಳಿಸಿದ ರಾಜ್ಯಪಾಲ-ವಿಶೇಷ ಅಧಿವೇಶನದಲ್ಲಿ ಮರು ಅಂಗೀಕಾರ

12:21 AM Nov 17, 2023 | Pranav MS |

ಚೆನ್ನೈ: ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನ ಶನಿವಾರ (ನ.18) ನಡೆಯಲಿದೆ. ಈ ಸಂದರ್ಭದದಲ್ಲಿ ರಾಜ್ಯಪಾಲ ಆರ್‌.ಎನ್‌.ರವಿ. ವಿವಿಧ ಕಾರಣಗಳನ್ನು ನೀಡಿ ಸರಕಾರಕ್ಕೆ ವಾಪಸ್‌ ಕಳುಹಿಸಿದ ಹತ್ತು ವಿಧೇಯಕಗಳನ್ನು ಅಂಗೀಕರಿಸಿ, ಮತ್ತೂಮ್ಮೆ ಅಂಗೀಕರಿಸಲಾಗುತ್ತದೆ. ಜತೆಗೆ ಅವರ ಅಂಗೀಕಾರಕ್ಕಾಗಿ ಕಳುಹಿಸಲು ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಸರಕಾರ ಗುರುವಾರ ತೀರ್ಮಾನಿಸಿದೆ.

Advertisement

ವಿಶೇಷ ಅಧಿವೇಶನದ ಬಗ್ಗೆ ಮಾತನಾಡಿದ ಸ್ಪೀಕರ್‌ ಎಂ.ಅಪ್ಪಾವು ಅವರು ಮಾತನಾಡಿ ನ.18ರಂದು ವಿಶೇಷ ಅಧಿವೇಶನ ನಡೆಯಲಿದೆ ಎಂದು ಹೇಳಿದ್ದಾರೆ.

ಪಂಜಾಬ್‌ ಮತ್ತು ತಮಿಳುನಾಡು ರಾಜ್ಯಪಾಲರ ವಿರುದ್ಧ ನ.10ರಂದು ಸುಪ್ರೀಂಕೋರ್ಟ್‌ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿ, ವಿನಾಕಾರಣವಾಗಿ ವಿಧೇಯಕಗಳನ್ನು ಸಹಿ ಹಾಕದೆ ಇರಿಸುವಂತೆ ಇಲ್ಲ ಎಂದು ಟೀಕಿಸಿತ್ತು. ಅದಕ್ಕೆ ಪೂರಕವಾಗಿ ಗುರುವಾರ ನಡೆದ ಬೆಳವಣಿಗೆಯಲ್ಲಿ ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಅವರು ಹತ್ತು ವಿಧೇಯಕಗಳನ್ನು ಸರಕಾರಕ್ಕೇ ವಾಪಸ್‌ ಕಳುಹಿಸಿದ್ದಾರೆ. ಮೂಲಗಳ ಪ್ರಕಾರ 12 ವಿಧೇಯಕಗಳು, 4 ಆದೇಶಗಳು, 54 ಕೈದಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೆ ಸಂಬಂಧಿಸಿದಂತೆ ಇರುವ ಸೂಚನೆಗೆ ರಾಜ್ಯಪಾಲರು ಸಹಿ ಹಾಕಬೇಕಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next