Advertisement

ಪಕ್ಷದ ಕಾರ್ಯಕರ್ತನ ಮೇಲೆ ಕಲ್ಲು ತೂರಿದ ತಮಿಳುನಾಡು ಸಚಿವ ; ವೈರಲ್ ವಿಡಿಯೋ

03:18 PM Jan 24, 2023 | Team Udayavani |

ತಿರುವಳ್ಳೂರು: ತನಗೆ ಕುಳಿತುಕೊಳ್ಳಲು ಕುರ್ಚಿ ತರಲು ವಿಳಂಬ ಮಾಡಿದ ಪಕ್ಷದ ಕಾರ್ಯಕರ್ತನ ಮೇಲೆ ತಮಿಳುನಾಡು ಸಚಿವ ಎಸ್‌ಎಂ ನಾಸರ್ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

Advertisement

ಬಯಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕುರ್ಚಿಗಳನ್ನು ತೆಗೆದುಕೊಂಡು ಓಡೋಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಚಿವರ ಈ ರೀತಿಯ ವರ್ತನೆಗೆ ವಿಪಕ್ಷಗಳು ವ್ಯಾಪಕ ಟೀಕೆ ಮಾಡಿವೆ.

ಕಳೆದ ವರ್ಷ, ಎಸ್‌ಎಂ ನಾಸರ್ ಅವರು ಕೇಂದ್ರ ಸರ್ಕಾರವು ಹಾಲಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿದೆ ಎಂದು ಸುಳ್ಳು ಮಾಹಿತಿ ನೀಡಿ ಸುದ್ದಿಯಾಗಿ ಟೀಕೆಗೆ ಗುರಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next