Advertisement

ಎಐಎಡಿಎಂಕೆಗೆ ರಜನಿ ಸೇರ್ಪಡೆ?

10:15 AM Aug 07, 2018 | Team Udayavani |

ಚೆನ್ನೈ: ರಾಜಕೀಯ ಪ್ರವೇಶ ಘೋಷಣೆ ಮಾಡಿರುವ ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಎಐಎಡಿಎಂಕೆ ಸೇರ್ಪಡೆ ಆಗುತ್ತಾರಾ? ಇಂಥ ಒಂದು ವದಂತಿ ತಮಿಳುನಾಡಿನ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲೀಗ ಬಿರುಸಾಗಿದೆ.  ತಮಿಳು ಸುದ್ದಿವಾಹಿನಿ ಸಂಸ್ಕೃತಿ ಸಚಿವ ಮಾಫೊ ಕೆ. ಪಾಂಡ್ಯರಾಜನ್‌ ಜತೆಗೆ ನಡೆಸಿದ ಸಂದ ರ್ಶನದಲ್ಲಿ ಪ್ರಸ್ತಾಪವಾದ ಅಂಶ ಈ ಬೆಳ ವಣಿಗೆಗೆ ಕಾರಣವಾಗಿದೆ. ತಮಿಳು ಸೂಪರ್‌ ಸ್ಟಾರ್‌ ಇತ್ತೀ ಚಿನ ದಿನಗಳಲ್ಲಿ ಆಡಳಿತ ಪಕ್ಷಕ್ಕೆ ಹೆಚ್ಚು ಆಪ್ತ ರಾಗಿರುವಂತೆ ಕಂಡು ಬರುತ್ತಿದ್ದಾ ರಲ್ಲವೇ ಎಂದು ಚಾನೆಲ್‌ ಸಂಪಾದಕ ಪ್ರಶ್ನಿಸಿದ್ದರು. “ಯಾರಿಗೆ ಗೊತ್ತು? ಅವರು ಇನ್ನೂ ಹತ್ತಿರಕ್ಕೆ ಬರುವ ಸಾಧ್ಯತೆ ಇದೆ’ ಎಂದು ಸಚಿವ ಉತ್ತರಿಸಿದರು.

Advertisement

ಮತ್ತೂ ಪಟ್ಟು ಬಿಡದ ಕಾರ್ತಿಗ ಚೆಲ್ವನ್‌ “ರಜನಿಕಾಂತ್‌ ನಿಮ್ಮ ಪಕ್ಷದ ಜತೆ ಚುನಾವಣಾ ಮೈತ್ರಿ ಏರ್ಪಡಿಸಲಿ ದ್ದಾರೆಯೇ?’ ಎಂದು ಪ್ರಶ್ನಿಸಿದರು. ಅದಕ್ಕೂ ಜಾಣತನದಿಂದಲೇ ಉತ್ತರಿಸಿದ ಸಚಿವ ಮಾಫೊ “ಅದು ಮೈತ್ರಿಕೂಟವೂ ಆಗಬಹುದು. ರಜನಿಕಾಂತ್‌ ಅವರು ನಮ್ಮ ಪಕ್ಷವನ್ನೂ ಸೇರಬಹುದು’ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಸಂದರ್ಶನದ ಈ ಅಂಶ ವೈರಲ್‌ ಆಗಿದೆ. 

 ಎಂಜಿಆರ್‌ ಮಾದರಿಯಲ್ಲಿ ಉತ್ತಮ ಆಡಳಿತ ನೀಡು ವುದೇ ತಮ್ಮ ಗುರಿ ಎಂದು ರಜನಿಕಾಂತ್‌ ಹೇಳಿಕೊಂಡಿದ್ದರು. ರಾಜಕೀಯ ಪಕ್ಷ ಸ್ಥಾಪನೆ, ಅದರ ಜನ ಪ್ರಿಯತೆಗಾಗಿ ಓಡಾಟ, ಖರ್ಚು ಸೇರಿದಂತೆ ಹಲವಾರು ವಿಚಾರಗಳು ಒಳಗೊಂಡಿರುವುದರಿಂದ ರಜನಿಕಾಂತ್‌ ಅವರು ತಮ್ಮದೇ ಆದ ರಾಜಕೀಯ ಪಕ್ಷ ಸ್ಥಾಪನೆ ಯೋಜನೆ ಕೈ ಬಿಟ್ಟು ಎಐಎಡಿಎಂಕೆಗೆ ಸೇರ್ಪಡೆಯಾಗಲಿದ್ದಾರೆ. ಜತೆಗೆ ಆ ಪಕ್ಷದಲ್ಲಿರುವ ಭಿನ್ನಮತವೂ ಅವರ ನಿರ್ಧಾರಕ್ಕೆ ಕಾರಣ ಎಂಬ ವಾದ ಸರಣಿಗಳು ತಮಿಳುನಾಡಿನಾದ್ಯಂತ ಹರಿದಾಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next