Advertisement

ಮೋದಿಗೆ ನೊಬೆಲ್‌ ಕೊಡಿ

08:30 AM Sep 25, 2018 | Team Udayavani |

ಚೆನ್ನೈ: ಪ್ರಧಾನಿ ಮೋದಿಯವರ ಹೆಸರನ್ನು ಪ್ರತಿಷ್ಠಿತ ನೊಬೆಲ್‌ ಶಾಂತಿ ಪಾರಿತೋಷಕಕ್ಕಾಗಿ ಶಿಫಾರಸು ಮಾಡಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸೈ ಸೌಂದರರಾಜನ್‌ ತಿಳಿಸಿದ್ದಾರೆ. 10 ಲಕ್ಷ ಫ‌ಲಾನುಭವಿಗಳಿಗೆ ಉಪಯೋಗವಾಗುವ ಪ್ರಧಾನಮಂತ್ರಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಮೋದಿಯವರನ್ನು ಈ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾಗಿ ಅವರು ಹೇಳಿದ್ದಾರೆ. ಖಾಸಗಿ ಕಾಲೇಜೊಂದರಲ್ಲಿ ಪ್ರೊಫೆಸರ್‌ ಆಗಿರುವ ತಮ್ಮ ಪತಿ ಡಾ| ಪಿ. ಸೌಂದರಾಜನ್‌ ಕೂಡ ಪ್ರಧಾನಿ ಮೋದಿಯವರ ಹೆಸರನ್ನು ನೊಬೆಲ್‌ಗೆ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next