Advertisement

‘ಸರ್ಕಾರ್‌’ಗೆ 140 ಕೋಟಿ

09:00 AM Nov 12, 2018 | Karthik A |

ಚೆನ್ನೈ/ಮುಂಬಯಿ: ವಿವಾದಕ್ಕೊಳಗಾಗಿದ್ದ ನಟ ವಿಜಯ್‌ ನಟಿಸಿರುವ ‘ಸರ್ಕಾರ್‌’ ತಮಿಳು ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಐದು ದಿನಗಳಲ್ಲಿ 145 ಕೋಟಿ ರೂ. ಆಗಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಅದು 100 ಕೋಟಿ ರೂ. ಬಾಚಿಕೊಂಡಿತ್ತು. ನ.16ರವರೆಗೆ ಸಿನಿಮಾದ ಗಳಿಕೆಯ ಓಟ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಅಮೆರಿಕದಲ್ಲಿ 5 ಕೋಟಿ ರೂ., ಯು.ಕೆ.ಯಲ್ಲಿ 4 ಕೋಟಿ ರೂ.ಗಳಿಸಿದೆ. ಇದೇ ವೇಳೆ ಬಾಲಿವುಡ್‌ ನಟ ಅಮೀರ್‌ ಖಾನ್‌ ಅಭಿನಯದ ‘ಥಗ್ಸ್‌ ಆಫ್ ಹಿಂದುಸ್ತಾನ್‌’ ಬಿಡುಗಡೆಯಾಗಿರುವ ಮೂರು ದಿನಗಳಲ್ಲಿ 100 ಕೋಟಿ ರೂ. ದಾಟಿ ಮುನ್ನಡೆದಿದೆ. ಶನಿವಾರ ಅಮೀರ್‌ ಅಭಿನಯಿಸಿದ ಸಿನಿಮಾ 22.7 ಕೋಟಿ ರೂ. ಗಳಿಸಿತ್ತು. ವಿಶ್ವದ 700 ಸಿನಿಮಾ ಪರದೆಗಳಲ್ಲಿ ಅದು ಬಿಡುಗಡೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next