ಚೆನ್ನೈ: ಕಾಲಿವುಡ್ ನಟ ಧನುಷ್ (Dhanush) – ಐಶ್ವರ್ಯಾ ರಜನಿಕಾಂತ್ (Aishwarya Rajinikanth) ವಿಚ್ಚೇದನ (Divorce) ಅರ್ಜಿ ವಿಚಾರಣೆಗೆ ಗುರುವಾರ (ನ.21ರಂದು) ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಧನುಷ್ – ಐಶ್ವರ್ಯಾ 2022ರಲ್ಲಿ ದಾಂಪತ್ಯ ಜೀವನಕ್ಕೆ ವಿಚ್ಚೇದನ ಘೋಷಿಸಿದ್ದರು. ಈ ಸಂಬಂಧ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಸಿದ್ದ ಬಳಿಕ ಇಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ. ಮುನಿಸು ಮರೆತು ಮಕ್ಕಳಿಗಾಗಿ ಧನುಷ್ – ಐಶ್ವರ್ಯಾ ಅವರು ಒಂದಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
ಇದನ್ನೂ ಓದಿ: Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
ವಿಚ್ಛೇದನದ ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಕ್ಕಳಿಗಾಗಿ ಜತೆಯಾಗಿ ಬಾಳಿ ಎಂದು ಎರಡೂ ಕುಟುಂಬದ ಹಿರಿಯರು ಅನೇಕ ಬಾರಿ ರಾಜಿ-ಪಂಚಾಯಿತಿ ಮಾಡಿದ್ದರು. ಇದೆಲ್ಲದರ ಹೊರತಾಗಿಯೂ ಧನುಷ್ – ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮತ್ತಷ್ಟು ಹೆಚ್ಚಾಗಿದೆ.
ಇಷ್ಟು ದಿನ ವಿಚ್ಚೇದನ ಅರ್ಜಿ ವಿಚಾರಣೆಗೆ ಹಾಜರಾಗಾದ ಧನುಷ್ – ಐಶ್ವರ್ಯಾ ಮೊದಲ ಬಾರಿಗೆ ಫ್ಯಾಮಿಲಿ ಕೋರ್ಟಿಗೆ ಬಂದಿದ್ದಾರೆ. ನ್ಯಾಯಧೀಶರು ಎರಡು ಕಡೆಯ ವಾದವನ್ನು ಆಲಿಸಿ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿದಿದ್ದಾರೆ. ಅದೇ ದಿನ ಅಂತಿಮ ತೀರ್ಪು ಪ್ರಕಟವಾಗಲಿದೆ ಎಂದು ವರದಿಯಾಗಿದೆ.
ಧನುಷ್ – ಐಶ್ವರ್ಯಾ ಕೋರ್ಟಿಗೆ ಹಾಜರಾಗುವ ವೇಳೆ ಮಾಸ್ಕ್ ಹಾಕಿಕೊಂಡು ಬಂದಿರುವ ವಿಡಿಯೋ ವೈರಲ್ ಆಗಿದೆ.
ಧನುಷ್- ಐಶ್ವರ್ಯಾ ರಜನಿಕಾಂತ್ ಪರಸ್ಪರ ಪ್ರೀತಿಸಿ 2004ರಲ್ಲಿ ಮದುವೆಯಾದರು. ಅವರಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಪುತ್ರರು ಇದ್ದಾರೆ.