Advertisement

ತಮಿಳು ಚಿತ್ರರಂಗ; ಲೈಂ*ಗಿಕ ದೌರ್ಜನ್ಯ ಎಸಗಿದರೆ 5 ವರ್ಷ ನಿಷೇಧ!

12:54 AM Sep 06, 2024 | Team Udayavani |

ಚೆನ್ನೈ: ನ್ಯಾ| ಹೇಮಾ ಸಮಿತಿ ವರದಿ ಮಲಯಾಳ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ತಮಿಳು ಚಿತ್ರರಂಗವೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಎಚ್ಚೆತ್ತುಕೊಂಡಿದೆ. ಲೈಂಗಿಕ ದೌರ್ಜನ್ಯ ಅಪರಾಧಿಗಳಿಗೆ ತಮಿಳು ಚಿತ್ರರಂಗದಿಂದ 5 ವರ್ಷಗಳ ನಿಷೇಧ ಹೇರಲು ದಕ್ಷಿಣ ಭಾರತದ ಕಲಾವಿದರ ಸಂಘವು (ಎಸ್‌ಐಎಐ-ನಾಡಿಗರ್‌ ಸಂಘಮ್‌) ನಿರ್ಣಯ ಅಂಗೀಕರಿಸಿದೆ.

Advertisement

ನಾಡಿಗರ್‌ ಸಂಘಮ್‌ ಮತ್ತು ಅದರ ಆಂತರಿಕ ದೂರುಗಳ ಸಮಿತಿ ಬುಧವಾರ ಚೆನ್ನೈಯಲ್ಲಿ ಮಹತ್ವದ ಸಭೆ ನಡೆಸಿದ್ದವು. ಈ ವೇಳೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ಮಟ್ಟ ಹಾಕುವುದಕ್ಕಾಗಿ ಉದ್ಯಮದ ಒಳಗಿನ ಜನರಿಗೆ ಬೆಂಬಲ ನೀಡುವಂಥ ಅನೇಕ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಲೈಂಗಿಕ ದೌರ್ಜನ್ಯ ಅಪರಾಧಿಯನ್ನು 5 ವರ್ಷ ಬ್ಯಾನ್‌ ಮಾಡುವ ಪ್ರಮುಖ ನಿರ್ಣಯವೂ ಸೇರಿದೆ.

ಆರೋಪ ಸಾಬೀತಾದಲ್ಲಿ ನಿರ್ಮಾಪಕರ ಸಂಘವೇ ಅಪರಾಧಿಯನ್ನು ನಿಷೇಧಿಸಬೇಕೆಂದು ನಿರ್ಧರಿಸಲಾಗಿದೆ. ಇದಲ್ಲದೇ ದೂರು ನೀಡಲು ಬರುವವರಿಗೆ ಅಗತ್ಯ ಕಾನೂನು ನೆರವು ನೀಡುವುದಾಗಿಯೂ ಸಮಿತಿ ಹೇಳಿದೆ. ಮಾಧ್ಯಮಗಳ ಮುಂದೆ ಹೋಗುವ ಬದಲು ಸಮಿತಿಗೇ ದೂರು ನೀಡಬಹುದು, ಇದಕ್ಕಾಗಿ ಹೊಸ ಮೇಲ್‌ ಐಡಿಯನ್ನೂ ರಚಿಸಿರುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next