Advertisement

ಬಂಟ್ವಾಳದಲ್ಲಿ ತಲ್ವಾರ್ ಹಿಡಿದು BJP ಕಾರ್ಯಕರ್ತರನ್ನು ಅಟ್ಟಾಡಿಸಿದ ನಟ

06:33 PM Jun 11, 2018 | Sharanya Alva |

ಬಂಟ್ವಾಳ: ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಸಂದರ್ಭದಲ್ಲಿ ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ ಚಿತ್ರಮಂದಿರ ಸಮೀಪ ತಲವಾರು ಝಳಪಿಳಿಸಿ ಅಟ್ಟಾಡಿಸಿ ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಬಜರಂಗದಳದ ಕಾರ್ಯಕರ್ತ ಭುವಿತ್ ಶೆಟ್ಟಿ ನೇತೃತ್ವದ ಗುಂಪು ಬಡ್ಡಕಟ್ಡೆಯ ಕ್ಷೌರದಂಗಡಿಗೆ ಭಾನುವಾರ ನುಗ್ಗಿ ಅಲ್ಲಿದ್ದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಅದಕ್ಕೆ ಪ್ರತಿಯಾಗಿ ಸುರೇಂದ್ರ ಭಂಡಾರಿ ನೇತೃತ್ವದ ಗುಂಪು ಭುವಿತ್ ಶೆಟ್ಟಿ ಗುಂಪಿನವರ ಮೇಲೆ‌ ಸೋಮವಾರ ಹಲ್ಲೆಗೆ ಯತ್ನಿಸಿದೆ. ಈ ಸಂದರ್ಭದಲ್ಲಿ ಸುರೇಂದ್ರ ತಲವಾರು ಹಿಡಿದು ತಿರುಗಾಡುತ್ತಾ ಬೆದರಿಕೆ ಹಾಕುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಹಾಗೂ ಪುಷ್ಪರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರೇಂದ್ರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next