Advertisement

ತಾ.ಪಂ. ರದ್ದತಿಗೆ ಬೇಡಿಕೆ: ಮುಖ್ಯಮಂತ್ರಿ ಜತೆಗಿನ ಸಭೆಯಲ್ಲಿ ಒತ್ತಾಯ

12:14 AM Jan 06, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ತಾಲೂಕು ಪಂಚಾಯತ್‌ ವ್ಯವಸ್ಥೆಯನ್ನೇ ರದ್ದುಗೊಳಿಸುವಂಥ ಆಗ್ರಹ ಶಾಸಕರಿಂದ ಕೇಳಿಬಂದಿದೆ. ಸಿಎಂ ಯಡಿಯೂರಪ್ಪ ಅವರು ಶಾಸಕರ ಜತೆ ನಡೆಸಿದ 2ನೇ ದಿನದ ಸಭೆಯಲ್ಲಿ ಶಾಸಕರು ಇಂಥ ಪ್ರಸ್ತಾವ ಮಂಡಿಸಿದ್ದು, ಇದಕ್ಕೆ ಸಂಬಂಧಿಸಿ ಕಾನೂನು ತಿದ್ದುಪಡಿ ತರುವಂತೆಯೂ ಒತ್ತಾಯಿಸಲಾಗಿದೆ.

Advertisement

ಮೂರು ಸ್ತರದ ಪಂಚಾಯತ್‌ ವ್ಯವಸ್ಥೆ ಜಾರಿಯಲ್ಲಿದ್ದರೂ ತಾ.ಪಂ.ಗಳಿಗೆ ಅನುದಾನ, ನಿರ್ದಿಷ್ಟ ಕೆಲಸ ಇಲ್ಲ. ಹೀಗಾಗಿ ಈ ವ್ಯವಸ್ಥೆ ಅನಗತ್ಯ ಆರ್ಥಿಕ ಹೊರೆ ಎಂದು ಸಭೆಯಲ್ಲಿ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರದ ಪಂ. ರಾಜ್‌ ಕಾಯ್ದೆಯ ಪ್ರಕಾರ, ಗ್ರಾ.ಪಂ. ಮತ್ತು ಜಿ.ಪಂ. ವ್ಯವಸ್ಥೆ ಕಡ್ಡಾಯ. ತಾ.ಪಂ. ವ್ಯವಸ್ಥೆಯನ್ನು ರಾಜ್ಯ ಸರಕಾರಗಳು ಅಗತ್ಯವಿದ್ದರೆ ಉಳಿಸಿಕೊಳ್ಳಬಹುದು. ಸದ್ಯ ಕೇಂದ್ರದಿಂದ ಬರುವ ಯೋಜನೆಗಳು ನೇರವಾಗಿ ಗ್ರಾ.ಪಂ.ಗೆ ಹೋಗುತ್ತವೆ. ಜಿ.ಪಂ.ಗೂ ಕೆಲವು ನಿರ್ದಿಷ್ಟ ಜವಾಬ್ದಾರಿಗಳಿವೆ. ಆದರೆ ತಾ.ಪಂ.ಗಳಿಗಿಲ್ಲ ಎಂಬುದು ಶಾಸಕರ ವಾದ.

ಆದರೆ ಪಂ. ರಾಜ್‌ ವ್ಯವಸ್ಥೆ ಬಗ್ಗೆ 1993ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತರಲಾಗಿದ್ದು, ಅದರ ಪ್ರಕಾರ ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ಬಂದಿದೆ. ಯಾವ ರಾಜ್ಯದ ಜನಸಂಖ್ಯೆ 20 ಲಕ್ಷಕ್ಕಿಂತ ಹೆಚ್ಚಿದೆಯೋ ಆ ರಾಜ್ಯದಲ್ಲಿ ಮೂರು ಹಂತದ ಪಂಚಾಯತ್‌ ವ್ಯವಸ್ಥೆ ಇರಬೇಕು ಎಂದು ಸಂವಿಧಾನದಲ್ಲಿಯೇ ಸ್ಪಷ್ಟಪಡಿಸಲಾಗಿದೆ.

ಈಗಿರುವ ವ್ಯವಸ್ಥೆಯನ್ನು ಬದಲಾಯಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಬದಲಾಯಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next