Advertisement
ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ನಾಗಮ್ಮಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ಕಾರಿ ಆಸ್ಪತ್ರೆ ಆವ್ಯವಸ್ಥೆ ಹಾಗೂ ಆಡಳಿತ ವೈಖರಿ ಬಗ್ಗೆಸದಸ್ಯರಾದ ಹರೀಶ್‌ನಾಯ್ಕ, ಬಲರಾಮ, ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಮಕ್ಕಳಿಗೆ ಕೋವಿಡ್: ಪಟ್ಟಣದ ಜ್ಞಾನಭಾರತಿ, ತಾಲೂಕಿನ ಅರಮನೆ ಹೊನ್ನಮಾಚನಹಳ್ಳಿ,ನೀಲಸಂದ್ರ ಸೇರಿದಂತೆ ನಾಲ್ಕು ಶಾಲೆಗಳಲ್ಲಿ ನಾಲ್ಕುಮಂದಿ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದು, ಆ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಶಾಲೆಗೆ ರಜಾ ನೀಡಲಾಗಿದೆ ಎಂದು ಬಿಇಒ ತಿಮ್ಮರಾಜು ತಿಳಿಸಿದರು.
149 ವಿದ್ಯಾರ್ಥಿ ವೇತನ ಇಲ್ಲ: ತಾಲೂಕಿನ ವಿವಿಧಸರ್ಕಾರಿ ಶಾಲೆಯಲ್ಲಿ ಓದುತಿರುವ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಏಕೆ ನೀಡಿಲ್ಲ ಎಂದು ಅಧ್ಯಕ್ಷೆ ನಾಗಮ್ಮ ಬಿಇಒಅವರನ್ನು ಪ್ರಶ್ನಿಸಿದರು. 2019-20 ಹಾಗೂ 2020- 21 ನೇ ಸಾಲಿನಲ್ಲಿ ಪ.ಜಾತಿಯ 108 ವಿದ್ಯಾರ್ಥಿಗಳಿಗೆಹಾಗೂ ಪಂಗಡ 11 ವಿದ್ಯಾರ್ಥಿಗಳಿಗೆ ಹಾಗೂ ಇತರೆ 33 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 149ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ದಾಖಲೆಗಳನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳಇಲಾಖೆಗೆ ಕಳಿಸಲಾಗಿದೆ ಎಂದು ಉತ್ತರಿಸಿದರು. ಈ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧ್ಯಕ್ಷರು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾಳಮ್ಮ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಪಾರ್ವತವ್ವ ಅವರನ್ನು ಪ್ರಶ್ನಿಸಿದರು. ಆಧಾರ್ ಲಿಂಕ್ ಆಗದ ಕಾರಣ ವೇತನಕ್ಕೆ ತೊಂದರೆ ಉಂಟಾಗಿದೆ ಎಂದರು.
ತಾಪಂ ಇಒ ಜೋಸೆಫ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿಯಾಉಲ್ಲಾ ಇದ್ದರು.
ಶಾಲೆ ಮಕ್ಕಳಿಂದಲೇಶೌಚಾಲಯ ಸ್ವಚ್ಛತೆ :
ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಶೌಚಾಲಯ ಮಕ್ಕಳಿಂದ ಸ್ವಚ್ಛತೆ ಮಾಡಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷೆ ನಾಗಮ್ಮ ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದಬಿಇಒ ತಿಮ್ಮರಾಜು, ಗ್ರಾಮೀಣ ಭಾಗದಶಾಲೆಗಳ ಶೌಚಾಲಯ ಸ್ವಚ್ಛ ಮಾಡಲು ಯಾರುಸಿಗುತ್ತಿಲ್ಲ. ಹಾಗಾಗಿ ಮಕ್ಕಳ ಸಚಿವ ಸಂಪುಟ ಮಾಡಿ ಆ ಮೂಲಕ ಶೌಚಾಲಯ ಸ್ವತ್ಛಗೊಳಿಸಿ ಅವರಲ್ಲಿ ಸ್ವಚ್ಛತಾ ಅರಿವು ಮೂಡಿಸಲಾಗುತ್ತಿದೆಎಂದು ತಿಳಿಸಿದರು. ಅಡುಗೆಯವರು ಅಥವಾ ಶಾಲಾ ಸಿಬ್ಬಂದಿಗಳಿಂದ ಸ್ವಚ್ಛತೆ ಮಾಡಿಸಿ ಎಂದು ಅಧ್ಯಕ್ಷರು ತಾಕೀತು ಮಾಡಿದರು.