Advertisement
ಈ ಮೂಲಕ ಪ್ರಸ್ತುತ ಇರುವ ತಾಲೂಕು ಮತ್ತು ಜಿ.ಪಂ. ಕ್ಷೇತ್ರ ಪುನರ್ ವಿಂಗಡನೆಯನ್ನು ರದ್ದುಪಡಿಸಿ ಮತ್ತೆ ಪುನರ್ ವಿಂಗಡಣೆ ಮಾಡಲು ನಿರ್ಧರಿಸಲಾಗಿದೆ. ಮಂಗಳವಾರ ವಿಧಾನಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಸೂದೆ ಮಂಡನೆ ಮಾಡಿದ್ದಾರೆ. ಆಯೋಗದ ಮೂಲಕ ತಾ.ಪಂ., ಜಿ.ಪಂ. ಕ್ಷೇತ್ರಗಳ ಪುನರ್ವಿಂಗಡನೆ ಮಾಡಲಾಗುತ್ತದೆ. ಮಸೂದೆ ಜಾರಿಯಾದ ತತ್‌ಕ್ಷಣ ತಾ.ಪಂ., ಜಿ.ಪಂ. ಕ್ಷೇತ್ರಗಳ ಈ ಹಿಂದಿನ ಎಲ್ಲ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆಗಳು ರದ್ದಾಗಲಿವೆ. ಜತೆಗೆ ತಾ.ಪಂ., ಜಿ.ಪಂ. ಕ್ಷೇತ್ರಗಳ ಮೀಸಲಾತಿಯೂ ರದ್ದಾಗಲಿದೆ. ಚುನಾವಣ ಆಯೋಗದ ಮೂಲಕ ಮತ್ತೂಂದು ಬಾರಿ ಮೀಸಲಾತಿ ಪ್ರಕಟಿಸಲಾಗುತ್ತದೆ.
- ಜನಗಣತಿ ಆಧಾರದಲ್ಲಿ ಪ್ರತೀ ತಾ.ಪಂ.ಗೆ ಕನಿಷ್ಠ 12,500ರಿಂದ 15 ಸಾವಿರ ಜನ ಸಂಖ್ಯೆಗೆ ಒಬ್ಬನಂತೆ ಸದಸ್ಯರ ಆಯ್ಕೆ.
- ಪ್ರತೀ ತಾ.ಪಂ.ನಲ್ಲಿ ಕನಿಷ್ಠ 11 ಸದಸ್ಯರು ಇರುವಂತೆ ಮಾಡುವುದು.
- ಸದಸ್ಯರಲ್ಲಿ 3ನೇ 1ರಷ್ಟು ಹಿಂ. ವರ್ಗ ದವರು ಇರುವಂತೆ ಮಾಡುವುದು.
- ಪ್ರತೀ ಕ್ಷೇತ್ರದಲ್ಲಿ ಕನಿಷ್ಠ 1 ಸ್ಥಾನ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡುವಂತೆ ನೋಡಿಕೊಳ್ಳುವುದು.
- ಕನಿಷ್ಠ ಶೇ.50ರಷ್ಟು ಮಹಿಳಾ ಮೀಸ ಲಾತಿ ಇರುವಂತೆ ಮಾಡುವುದು.