ಬಂಟ್ವಾಳ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವಿಚಾರವನ್ನು ತಿಳಿಯುವ ಮೂಲಕ ಸಂಶಯ ನಿವಾರಿಸಿಕೊಳ್ಳಬೇಕು. ಆಧುನಿಕ ಜಗತ್ತು ಬದಲಾವಣೆಯ ಕಾಲಘಟ್ಟದಲ್ಲಿದ್ದು ಅದರ ಜತೆ ಹೊಂದಾಣಿಕೆ ಆಗಬೇಕು ಎಂದು ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ ಹೇಳಿದರು.
ಅವರು ಗೋಳ್ತಮಜಲು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ತಾ| ಮಟ್ಟದ ವಿಜ್ಞಾನ ವಿಚಾರಗೋಷ್ಠಿಯನ್ನು ಉದ್ಘಾ
ಟಿಸಿ ಮಾತನಾಡಿದರು. ಪ್ರೌಢಶಿಕ್ಷಣ ನಿರ್ದೇಶನಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೆೇರಿ ಬಂಟ್ವಾಳ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮಹಮ್ಮದ್ ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಡಯಟ್ ಹಿರಿಯ ಉಪನ್ಯಾಸಕಿ, ನೋಡಲ್ ಅಧಿಕಾರಿ ಸುಮಂಗಲಾ ಪ್ರಸ್ತಾವನೆ ನೀಡಿ ಹೊಸ ವಿಚಾರಗಳು ವಿದ್ಯಾರ್ಥಿಗಳಿಗೆ ಮುಟ್ಟಬೇಕು. ಹೊಸ ಬೆಳವಣಿಗೆಗಳ ಬಗ್ಗೆ ನಮ್ಮ ಗಮನ ಹರಿಯಬೇಕು. ವಿಶಿಷ್ಟವಾದ ವಿಚಾರಗಳು ವಿದ್ಯಾರ್ಥಿಗಳ ಮನಸ್ಸಿಗೆ ಬರಬೇಕು. ಆ ಮೂಲಕ ವಿದ್ಯಾರ್ಥಿಯು ಪ್ರತಿಭಾನ್ವಿತನಾಗಿ ಹೊರಹೊಮ್ಮಬೇಕು ಎಂಬುದು ವಿಜ್ಞಾನ ವಿಚಾರಗೋಷ್ಠಿಯ ಮುಖ್ಯ ಉದ್ದೇಶ. ಗ್ರಾ.ಪಂ. ಸದಸ್ಯ ಮೋನಪ್ಪ ದೇವಸ್ಯ, ಶಾಲಾಭಿವೃದ್ದಿ ಸಮಿತಿಯ ಸದಸ್ಯ ಹಮೀದ್ ಗೋಳ್ತಮಜಲು, ಜಯಕುಮಾರ್ ಎಸ್. ಎನ್. ಶುಭ ಹಾರೈಸಿದರು.
ಮುಖ್ಯಶಿಕ್ಷಕ ಸೀತಾರಾಮ ಭಟ್ ಸ್ವಾಗತಿಸಿ, ವಿಜ್ಞಾನ ವಿಚಾರ ಗೋಷ್ಠಿ ತಾ| ನೋಡಲ್ ಅಧಿಕಾರಿ ಸುಜಾತಾ ವಂದಿಸಿದರು. ವಿಜ್ಞಾನಗೋಷ್ಠಿ ಸ್ಪರ್ಧೆಯಲ್ಲಿ 32 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ಮಂಡಿಸಿದರು. ಅಡ್ಯನಡ್ಕ ಜನತಾ ಪ.ಪೂ.ಕಾಲೇಜು ಉಪನ್ಯಾಸಕ ಗಣೇಶ್ ಕೆ.ಆರ್., ಕಲ್ಲಡ್ಕ ಶ್ರೀರಾಮ ಪ.ಪೂ.ಕಾಲೇಜು ಉಪನ್ಯಾಸಕಿ ರಕ್ಷಿತಾ ತೀರ್ಪುಗಾರರಾಗಿ ಸಹಕರಿಸಿದರು.
ವಿಜ್ಞಾನ ಸ್ಪರ್ಧೆಯಲ್ಲಿ ಪಾಣೆ ಮಂಗಳೂರು ಎಸ್.ಎಲ್.ಎನ್.ಪಿ. ವಿದ್ಯಾಲಯದ ಶ್ರೀನಿಧಿ ಪ್ರಥಮ, ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆಯ ವಿದ್ಯಾರ್ಥಿ ಪೂರ್ಣಚಂದ್ರ ವೈ.ಎಂ. ದ್ವಿತೀಯ, ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯ ಯಶಸ್ವಿ ತೃತೀಯ ಸ್ಥಾನ ಪಡೆದರು.ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.